ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ ಕ್ಷೇತ್ರ: ಮುಕ್ಕಾಲು ಅನುದಾನ ದೇವಸ್ಥಾನಗಳಿಗೆ

‘ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ’ಯಿಂದ ಬಂದಿದ್ದು ಅರ್ಧದಷ್ಟು ಅನುದಾನ ಮಾತ್ರ
Last Updated 5 ಅಕ್ಟೋಬರ್ 2021, 4:32 IST
ಅಕ್ಷರ ಗಾತ್ರ

ಸೇಡಂ: ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರು, ತಮ್ಮ ‘ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ’ಯಲ್ಲಿ ಹೆಚ್ಚಿನ ಪಾಲನ್ನು
ದೇವಾಲಯ ಹಾಗೂ ಧಾರ್ಮಿಕ ಕ್ಷೇತ್ರಗಳ ನಿರ್ಮಾಣ ಹಾಗೂ ಜೀರ್ಣೋದ್ಧಾರಕ್ಕೆ ಬಳಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ದುರಸ್ತಿ, ಕಾಂಪೌಂಡ್‌ ನಿರ್ಮಾಣ, ಶೌಚಾಲಯ ಸೇರಿದಂತೆ ಇನ್ನಿತರ ಮೌಲಸೌಕರ್ಯಗಳಿಗೆ ಎರಡನೇ ಆದ್ಯತೆ ನೀಡಿದ್ದಾರೆ.

2018ರಿಂದ ಇಲ್ಲಿಯವರೆಗೆ ಶಾಸಕರಿಗೆ ಒಟ್ಟು ₹ 4.5 ಕೋಟಿ ಕ್ಷೇತ್ರಾಭಿವೃದ್ಧಿ ನಿಧಿಯ ಅನುದಾನ ಬಂದಿದ್ದು, ಇದರಲ್ಲಿ ₹ 3.8 ಕೋಟಿಯಷ್ಟು ಅನುದಾನವನ್ನು ದೇವಾಲಯಗಳ ಜೀರ್ಣೋದ್ಧಾರ ಹಾಗೂ ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದೆ. ಉಳಿದ ಹಣವನ್ನು ಶಾಲೆಗಳಲ್ಲಿನ ಮೂಲಸೌಕರ್ಯಕ್ಕೆ ಒದಗಿಸಿದ್ದಾರೆ. ವಿಧಾನಸಭಾ ಕ್ಷೇತ್ರದಲ್ಲಿನ 76 ದೇವಾಸ್ಥಾನ ಹಾಗೂ 13 ಶಾಲೆಗಳ ಜೀರ್ಣೋದ್ಧಾರ ಇದರಲ್ಲಿ ಆಗಿದೆ ಎನ್ನುವುದುಶಾಸಕರ ವಿವರಣೆ.

ಕನಿಷ್ಠ ₹ 3 ಲಕ್ಷದಿಂದ ಗರಿಷ್ಠ ₹ 5 ಲಕ್ಷದವರೆಗೆ ಅನುದಾನವನ್ನು ಪ್ರತಿ ದೇವಾಲಯಕ್ಕೂ ನೀಡಲಾಗಿದೆ. ಈಗಾಗಲೇ ಅನೇಕ ದೇವಾಲಯಗಳ ಕಟ್ಟಡ ಪ್ರಾರಂಭವಾಗಿವೆ. ಇನ್ನೂ ಕೆಲವು ಕಡೆಗಳಲ್ಲಿ ದೇವಾಲಯ ಪೂರ್ಣಗೊಂಡಿವೆ. ಜೊತೆಗೆ ಶಾಲೆಯ ಮೂಲಸೌಕರ್ಯಗಳ ಅಭಿವೃದ್ಧಿ ನಡೆದಿದೆ.ಇದರ ಜೊತೆಗೆ ತಾಲ್ಲೂಕಿನ ರಂಜೋಳ ಗ್ರಾಮದ ಸಿಂಧನಮಡು ರಸ್ತೆಯ ಈದ್ಗಾ ಮೈದಾನ ಜೀರ್ಣೋದ್ಧಾರಕ್ಕೆ ಶಾಸಕರ ನಿಧಿಯ ಹಣವನ್ನು ನೀಡಲಾಗಿರುವುದು ವಿಶೇಷ. ಇದರ ಜೊತೆಗೆ ಅನೇಕ ಕಡೆಗಳಲ್ಲಿ ಸಂಪರ್ಕ ರಸ್ತೆ ಹಾಗೂಹಣದಿಗಳ ನಿರ್ಮಾಣಕ್ಕೂ ಹಣ ನೀಡುವ ಮೂಲಕ ಹೊಲಗಳಿಗೆಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ ಎಂಬುದು ಅವರ ಮಾಹಿತಿ.

‘ಶಾಸಕರ ನಿಧಿಯನ್ನು ನಾನು ಹೆಚ್ಚು ದೇವಾಲಯಗಳಿಗೆ ನೀಡುವ ಮೂಲಕ ಜನರಲ್ಲಿ ಶಾಂತಿ ಮತ್ತು ಭಕ್ತಿಯನ್ನು ಅರಳಿಸುವ ಕೆಲಸ ಮಾಡುತ್ತಿದ್ದೇನೆ’ ಎಂದು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆಸಿದರು.

*

ಇನ್ನೂ ಬರಬೇಕು ₹ 3.5 ಕೋಟಿ

ಪ್ರತಿವರ್ಷ ಶಾಸಕರಿಗೆ ₹ 2 ಕೋಟಿ ಅನುದಾನ ನೀಡಲಾಗುತ್ತಿದೆ. ನಾಲ್ಕು ಕಂತಿನಂತೆ (ಪ್ರತಿ ಕಂತಿನಲ್ಲಿ ₹ 50 ಲಕ್ಷ) ಒಟ್ಟಾರೆ ₹ 8 ಕೋಟಿ ಅನುದಾನ ಬರಬೇಕಿತ್ತು. ಆದರೆ ಇಲ್ಲಿಯವರೆಗೆ ಬಂದಿದ್ದು ಕೇವಲ ₹ 4.5 ಕೋಟಿ. ಇನ್ನೂ ₹ 3.5 ಕೋಟಿ ಬರಬೇಕಿದೆ. ಆದರೆ, ಕೊರೊನಾ, ಅತಿವೃಷ್ಟಿ ಸೇರಿದಂತೆ ವಿವಿಧ ಕಾರಣಾಂತರಗಳಿಂದ ಸರ್ಕಾರದಿಂದ ಬಂದಿಲ್ಲ ಎನ್ನುವುದು ಮೂಲಗಳ ವಿವರ.

ಸರಿಯಾದ ಸಮಯಕ್ಕೆ ಅನುದಾನ ಬಂದಿದ್ದಲ್ಲಿ ಇನ್ನೂ ಶಾಲೆ, ಕಾಲೇಜು ಸೇರಿಸಂತೆ ಮೂಲಸೌಕರ್ಯಗಳಿಗೆ ಆದ್ಯತೆ ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೆ. ಮುಂದಿನ ದಿನಗಳಲ್ಲಿ ಅನುದಾನ ಬರುವ ನೀರಿಕ್ಷೆಯಿದೆ ಎನ್ನುತ್ತಾರೆ ಶಾಸಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT