ಅಫಜಲಪುರ: ‘ರೈತರು ಬೆಳೆದಿರುವ ಹುಟ್ಟುವಳಿಗಳನ್ನು ಪಟ್ಟಣದ ಮಾರುಕಟ್ಟೆಗೆ ಮಾರಾಟ ಮಾಡಲು ರಸ್ತೆಗಳ ಪಾತ್ರ ಬಹಳ ಮುಖ್ಯವಾಗಿದೆ. ಅದಕ್ಕಾಗಿ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಸುಧಾರಣೆಯಾದರೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ. ಜನರು ಪಟ್ಟಣಕ್ಕೆ ಹೋಗಿ ಬರಲು ಅನುಕೂಲವಾಗುತ್ತದೆ. ಪರೋಕ್ಷವಾಗಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ’ ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು.

ತಾಲೂಕಿನ ಡಿಗ್ಗಿ ಕ್ರಾಸ್ನಿಂದ ಬೋಸಗಾ ಹೊಸ ಗ್ರಾಮದವರೆಗೆ ₹6.70 ಕೋಟಿ ವೆಚ್ಚದ ಡಾಂಬರೀಕರಣ ರಸ್ತೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ‘ಗುತ್ತಿಗೆದಾರರು ಗುಣಮಟ್ಟದ ರಸ್ತೆ ಕಾಮಗಾರಿ ನಡೆಸಬೇಕು’ ಎಂದು ಹೇಳಿದರು.

ಗ್ರಾಮದ ಮುಖಂಡ ಸುಭಾಷ್ ದೇಗನಾಳ ಮಾತನಾಡಿ, ‘ಶಾಸಕರು ನಮ್ಮ ಗ್ರಾಮಕ್ಕೆ ಇನ್ನೂ ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ’ ಎಂದರು. ಗ್ರಾಮದ ಮಹಿಳೆಯರು ಶೌಚಾಲಯ ನಿರ್ಮಾಣ ಕುರಿತು ಶಾಸಕರಿಗೆ ಮನವಿ ಮಾಡಿದರು. ಅದಕ್ಕೆ ಶಾಸಕರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮುಖಂಡರಾದ ಸಿದ್ದುಗೌಡ ಪಾಟೀಲ್, ಸೈಫನ್ ಮುಜಾವರ್, ಸುಭಾಷ್ ದೇಗನಾಳ, ಸತೀಶ್ ದೇಗನಾಳ, ಚಂದ್ರಕಾಂತ್ ದೊಡ್ಡಮನಿ, ತಿಪ್ಪಣ್ಣ ಬಳ್ಳುಂಡಗಿ, ಶಿವಾನಂದ ಪೂಜಾರಿ, ಹಿರಗಪ್ಪ ಪೂಜಾರಿ, ಅರ್ಜುನ್ ಪಡಸಾವಳಗಿ, ಪ್ರಭು ದೇವತ್ಕಲ್, ಸುಭಾಷ್ ದೇಗನಾಳ, ಸತೀಶ್ ದೇಗನಾಳ, ಹೊನ್ನಪ್ಪ ದೇಗನಾಳ, ಸಿದ್ದು ಬಸನಗೌಡ, ಸಿದ್ದಪ್ಪ ಬಂಕದ್, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಸರ್ವಜ್ಞ ಪೂಜಾರಿ, ಮಹೇಶ್ ಅಲೆಗಾಂವ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.