ಭಾನುವಾರ, ಅಕ್ಟೋಬರ್ 17, 2021
22 °C

ಗಡಿಕೇಶ್ವರದಲ್ಲಿ ಮತ್ತೆ ಲಘು ಭೂಕಂಪ, ಉರುಳಿಬಿದ್ದ ಪಾತ್ರೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರಗಿ ಜಿಲ್ಲೆ):  ತಾಲ್ಲೂಕಿನ ಹಲಚೇರಾ ಹಾಗೂ ಗಡಿಕೇಶ್ವರ ಗ್ರಾಮದಲ್ಲಿ ಶನಿವಾರ ನಸುಕಿನ 5.40ರ ಸಮಯದಲ್ಲಿ ಎರಡು ಬಾರಿ ಲಘು ಭೂ ಕಂಪನ ಅನುಭವವಾಗಿದೆ.

ಭೂಮಿ ಅಲುಗಾಡಿದ್ದಕ್ಕೆ  ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದವು. ಇದರಿಂದ ಎಚ್ಚರಗೊಂಡ ಜನ ಮನೆಯಿಂದ ಹೊರಬಂದರು.

ಶುಕ್ರವಾರ ಕೂಡ ಇಲ್ಲಿ ಎರಡು ಬಾರಿ ಲಘು ಭೂ ಕಂಪನವಾಗಿತ್ತು. 24 ಗಂಟೆಗಳಲ್ಲಿ ಭೂಮಿ ಮೂರು ಬಾರಿ ಕಂಪಿಸಿದಂತಾಗಿದೆ.

ಕಳೆದ ಕೆಲ ವರ್ಷಗಳಿಂದ  ಭೂಮಿಯಿಂದ ಕೇಳಿ ಬರುತ್ತಿರುವ ಭಾರಿ ಸ್ಫೋಟಕ ಸದ್ದು ಜನರಲ್ಲಿ ಆತಂಕ ಮೂಡಿಸಿದೆ.

ಶನಿವಾರ ಬೆಳಿಗ್ಗೆ 5.30ರಿಂದ 6 ಗಂಟೆ ಒಳಗೆ ಮೂರು ಸಾರಿ ಭಾರಿ  ಶಬ್ದ ಕೇಳಿಸಿದೆ ಎಂದು ಗ್ರಾಮಸ್ಥರು ಅನುಭವ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು