ಕಲಬುರ್ಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗಾಗಿ ಮೀಸಲಿಟ್ಟ ಎರಡು ಸಾವಿರ ಹಾಸಿಗೆಗಳ ಪೈಕಿ 1800ಕ್ಕೂ ಅಧಿಕ ಹಾಸಿಗೆಗಳು ಖಾಲಿಯಾಗಿದ್ದು, 208 ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಸೋಂಕು ಕ್ರಮೇಣ ಇಳಿಯುತ್ತಿರುವುದು ಜಿಲ್ಲಾಡಳಿತಕ್ಕೂ, ಆರೋಗ್ಯ ಇಲಾಖೆಗೂ ಕೊಂಚ ಸಮಾಧಾನ ಮೂಡಿಸಿದೆ. ಆದರೆ, ಮೂರನೇ ಅಲೆಯ ಸಾಧ್ಯತೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವುದರಿಂದ ಈ ಹಾಸಿಗೆಗಳನ್ನು ಹಾಗೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಜೊತೆಗೆ ಜಿಮ್ಸ್ ಹಾಗೂ ಜಿಲ್ಲಾಸ್ಪತ್ರೆಯಲ್ಲಿರುವ ಮಕ್ಕಳ ಬೆಡ್ಗಳನ್ನು ಹೆಚ್ಚಿಸುವಂತೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಸೂಚನೆ ನೀಡಿದ್ದಾರೆ.

ಇಳಿಮುಖವಾದ ಸೋಂಕು: ಏಪ್ರಿಲ್ 28ರಂದು ಸೆಮಿ ಲಾಕ್ಡೌನ್ ಹೇರುವು ದಕ್ಕೂ ಮುನ್ನ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಸಂಬಂಧಿಗಳಿಗಾಗಿ ಬೆಡ್ಗಳಿಗಾಗಿ, ಅದರಲ್ಲೂ ಆಮ್ಲಜನಕ ನೆರವಿನ ಮತ್ತು ವೆಂಟಿಲೇಟರ್ ಸೌಲಭ್ಯದ ಬೆಡ್ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದರು. ಶಾಸಕರು, ಸಂಸದರು ಹೇಳಿದರೂ ಆಸ್ಪತ್ರೆಗಳಲ್ಲಿ ಬೆಡ್ ನೀಡದ ಪರಿಸ್ಥಿತಿ ಎದುರಾಗಿತ್ತು. ಆಮ್ಲಜನಕ ಸಿಲಿಂಡರ್ಗಳಗಾಗಿಯೂ ಬೇಡಿಕೆ ಸಾಕಷ್ಟಿತ್ತು.

ರಾಜ್ಯ ಸರ್ಕಾರ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ಆಮ್ಲಜನಕ ಸಿಲಿಂಡರ್ಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಅದರ ಅಭಾವವಾಗದಂತೆ ನೋಡಿ ಕೊಂಡಿತು. ಜೊತೆಗೆ, ಕ್ರಮೇಣ ಆಮ್ಲಜನಕ ಬೆಡ್ಗಳ ಸಂಖ್ಯೆಯನ್ನೂ ಹೆಚ್ಚಿಸಲಾಯಿತು. ಎರಡನೇ ಅಲೆಯ ಪ್ರಭಾವ ಕುಗ್ಗುತ್ತಿದ್ದಂತೆಯೇ ಬೆಡ್ಗಳು ಖಾಲಿ ಉಳಿದಿವೆ.

ಲಾಕ್ಡೌನ್ ಅವಧಿಯಲ್ಲಿ ಜನಸಂಚಾರ ಗಣನೀಯವಾಗಿ ಕುಗ್ಗಿದ್ದರಿಂದ ಸೋಂಕು ಹರಡುವಿಕೆ ಕಡಿಮೆಯಾಯಿತು.

200 ಆಮ್ಲಜನಕ ಸಾಂದ್ರಕ: ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಲಿಂಡರ್ಗಳ ಅಭಾವ ಎದುರಾಗಿದ್ದರಿಂದ ಪರ್ಯಾಯ ಹಾದಿ ಕಂಡುಕೊಂಡ ಜಿಲ್ಲಾಡಳಿತ ರಾಜ್ಯ ಸರ್ಕಾರ ಹಾಗೂ ದಾನಿಗಳಿಂದ 200 ಆಮ್ಲಜನಕ ಸಾಂದ್ರಕಗಳನ್ನು ಪಡೆದುಕೊಂಡು ಅವಶ್ಯಕತೆ ಇರುವವರಿಗೆ ಹಂಚಿಕೆ ಮಾಡಿತು. ಇವುಗಳನ್ನು ತಲಾ 15 ಸಾಂದ್ರಕಗಳಂತೆ ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ಕಳಿಸಿಕೊಡಲಾಗಿದೆ. ಹೋಂ ಐಸೋಲೇಶನ್ನಲ್ಲಿ ಇದ್ದವರಿಗೂ ಬೇಡಿಕೆ ಮೇರೆಗೆ ಕಳಿಸಿಕೊಡಲಾಗಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ.

250 ಜಂಬೊ ಸಿಲಿಂಡರ್: ಆಮ್ಲಜನಕ ಸಿಲಿಂಡರ್ಗಳಿಗಾಗಿ ಖಾಸಗಿಯವರ ಮೇಲೆ ಅವಲಂಬನೆಯಾಗಿದ್ದ ಜಿಲ್ಲಾಡಳಿತಕ್ಕೆ ವಂಚಿಸಿ ಖಾಸಗಿ ಸಂಸ್ಥೆಯವರು ಹೈದರಾಬಾದ್ಗೆ ಮಾರಾಟ ಮಾಡುವುದು ಗಮನಕ್ಕೆ ಬಂದ ಬಳಿಕ ಜಪ್ತಿ ಮಾಡಲಾಗಿತ್ತು. ಜಿಲ್ಲೆಯ ನಾಲ್ಕು ಆಮ್ಲಜನಕ ಉತ್ಪಾದನಾ ಸಂಸ್ಥೆಗಳಿಂದ 900 ಸಿಲಿಂಡರ್ಗಳನ್ನು ಪಡೆಯಲಾಗುತ್ತಿತ್ತು. ಬಳ್ಳಾರಿಯಿಂದ ಆಮ್ಲಜನಕ ಹೊತ್ತ ಟ್ಯಾಂಕರ್ ಬಂದರೂ ಅದನ್ನು ಸಂಗ್ರಹಿಸಲು ಅಗತ್ಯವಾದ ಸಂಗ್ರಹ ಘಟಕ ಹಾಗೂ ಸಿಲಿಂಡರ್ಗಳು ಕೊರತೆ ಇದ್ದವು. ಹೀಗಾಗಿ, ಜಿಲ್ಲಾಡಳಿತವೇ 200 ಆಮ್ಲಜನಕ ಸಿಲಿಂಡರ್ ಖರೀದಿಸಿತು. ಅಲ್ಲದೇ, ಎನ್. ಧರ್ಮಸಿಂಗ್ ಪ್ರತಿಷ್ಠಾನ ಸೇರಿದಂತೆ ಹಲವು ಸಂಸ್ಥೆಗಳವರು 50 ಸಿಲಿಂಡರ್ಗಳನ್ನು ನೀಡಿದ್ದಾರೆ. ಅವುಗಳನ್ನು ತಲಾ 20ರಂತೆ ತಾಲ್ಲೂಕು ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ. ಎಂತದೇ ಕಠಿಣ ಪರಿಸ್ಥಿತಿ ಬಂದರೂ ಹೆಚ್ಚುವರಿ ಆಮ್ಲಜನಕದ ಸಿಲಿಂಡರ್ ಇರಬೇಕು ಎಂಬ ಉದ್ದೇಶದಿಂದ ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂದು ಡಾ. ಶರಣಬಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಬಲಗೊಳ್ಳಲಿವೆ ತಾಲ್ಲೂಕು ಆಸ್ಪತ್ರೆಗಳು

ಕೋವಿಡ್ ಎರಡನೇ ಅಲೆಯನ್ನು ನಿರ್ವಹಿಸುವಲ್ಲಿ ಹೈರಾಣಾದ ಜಿಲ್ಲಾಡಳಿತ ಎಲ್ಲ ಒತ್ತಡವೂ ಜಿಲ್ಲಾ ಆಸ್ಪತ್ರೆ ಹಾಗೂ ಇಎಸ್ಐಸಿ ಮೇಲೆ ಬೀಳುವುದನ್ನು ತಡೆಯಲು ತಾಲ್ಲೂಕು ಆಸ್ಪತ್ರೆಗಳನ್ನು ಬಲಗೊಳಿಸಲು ಮುಂದಾಗಿದೆ.

ಅದಕ್ಕಾಗಿ ಚಿಂಚೋಳಿ, ಚಿತ್ತಾಪುರ, ಸೇಡಂ, ಅಫಜಲಪುರ, ಜೇವರ್ಗಿ ಸೇರಿದಂತೆ ಹಲವು ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳನ್ನು ಆರಂಭಿಸಲಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಈ ಪ್ರಕ್ರಿಯೆ ನಡೆದಿದ್ದು, ರೋಗಿಗಳನ್ನು ಮೊದಲು ತಾಲ್ಲೂಕು ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತದೆ. ತೀರಾ ಗಂಭೀರ ಪ್ರಕರಣಗಳಿದ್ದರಷ್ಟೇ ಜಿಮ್ಸ್ಗೆ ಕರೆತರಲಾಗುತ್ತದೆ.

ಅಲ್ಲದೇ, 20 ವರ್ಷಗಳಿಂದ ಪಾಳು ಬಿದ್ದಿದ್ದ ಶಹಾಬಾದ್ನ ಇಎಸ್ಐ ಆಸ್ಪತ್ರೆಯನ್ನು₹ 12 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದ್ದು, ಹೊಸ ತಾಲ್ಲೂಕುಗಳಲ್ಲಿನ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.