ಸೋಮವಾರ, ಜೂನ್ 21, 2021
30 °C

ಕಲಬುರ್ಗಿ: ಮಹಿಳಾ‌ ನಿಲಯದ ಎದುರು ಯುವಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ಆಳಂದ ರಸ್ತೆಯಲ್ಲಿರುವ ‌ಮಹಿಳಾ ನಿಲಯದ ಆವರಣದಲ್ಲಿ ಯುವಕನನ್ನು ಬುಧವಾರ ‌ಸಂಜೆ ಕೊಲೆ ಮಾಡಲಾಗಿದೆ.

ದೇವಿ ನಗರದ ‌ನಿವಾಸಿ ಶೀತಲ್ ಜೈನ್ (35) ಕೊಲೆಯಾದ ಯುವಕ.

ತನಗೆ ಪರಿಚಯದ ಆಫ್ರೀನ್ ಎಂಬ ಮಹಿಳೆಯ ಇಬ್ಬರು ಮಕ್ಕಳು  ಮಹಿಳಾ ನಿಲಯದಲ್ಲಿದ್ದರು. ಅವರನ್ನು ಕರೆದುಕೊಂಡು ಹೋಗಲು ಆಫ್ರೀನ್ ಜೊತೆಗೆ ಶೀತಲ್ ಬಂದಿದ್ದರು. ಈ ಬಗ್ಗೆ ‌ಮಾಹಿತಿ ಪಡೆದ ಮಹಿಳೆಯ ಸಹೋದರರಾದ ಅಮ್ಜದ್ ಮತ್ತು ಮೆಹಬೂಬ್ ಎಂಬುವವರು ಉದ್ದನೆಯ ಕುಡುಗೋಲಿನಿಂದ ಮುಖಕ್ಕೆ ಹೊಡೆದರು. ನಂತರ ಕಲ್ಲು ಎತ್ತಿ ಅಲ್ಲಿಂದ ಪರಾರಿಯಾಗಿದ್ದಾರೆ‌. ಆಫ್ರೀನ್ ಹಾಗೂ ಶೀತಲ್ ಮಧ್ಯೆ ಅಕ್ರಮ ಸಂಬಂಧ ಇತ್ತು ಎಂಬ ಸಂಶಯದಿಂದ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಕರಣ ಸಂಬಂಧ ರಾಘವೇಂದ್ರ ನಗರ ‌ಠಾಣೆ ಪೊಲೀಸರು ಕುಲಸುಮ್ ಬಿ, ಅಮ್ಜದ್ ಮತ್ತು ಮೆಹಬೂಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು