ಕಲಬುರಗಿ: ‘ರಂಗಭೂಮಿ ಬಹುಸಂಸ್ಕೃತಿಗಳ ತವರು. ಇಲ್ಲಿ ಸಮಾಜದ ಹಲವು ತಿಳಿವಳಿಕೆಗಳು, ಜೀವನದ ಅನೇಕ ತತ್ವಗಳು, ಭಾಷೆಯ ವಿವಿಧ ಕ್ರಮಗಳು ಬೆರೆತು ಹೋಗಿರುತ್ತವೆ. ಇದರಿಂದ ಜೀವನವನ್ನು ಅರಿಯುವ ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ರಂಗಭೂಮಿಯ ಹೊಸ ಪ್ರದರ್ಶನಗಳು ಹೊಸ ತಲೆಮಾರನ್ನು ರೂಪಿಸುತ್ತವೆ’ ಎಂದು ನಾಟಕಕಾರ, ಕರ್ನಾಟಕ ಕೇಂದ್ರೀಯ ವಿ.ವಿ. ಭಾಷಾ ನಿಕಾಯದ ಡೀನ್ ಪ್ರೊ.ವಿಕ್ರಮ ವಿಸಾಜಿ ಅಭಿಪ್ರಾಯಪಟ್ಟರು.

ಕಲಬುರಗಿ ರಂಗಾಯಣದ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಬಹುಭಾಷಾ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ಭಾಗದಲ್ಲಿ ಜನಪದ ರಂಗಭೂಮಿ, ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ, ಉರ್ದು ರಂಗಭೂಮಿ ಮತ್ತು ಮರಾಠಿ ರಂಗಭೂಮಿ ಒಟ್ಟಿಗೆ ಬೆಳೆದಿವೆ. ಪರಸ್ಪರ ಕಲಿತಿವೆ. ರಂಗಭೂಮಿಯ ಈ ಸೌಹಾರ್ದ ಸಂಸ್ಕೃತಿಯನ್ನು ಪೋಷಿಸಬೇಕಾಗಿದೆ. ಪರಸ್ಪರ ಕಲಿಯುವ ಅವಕಾಶವನ್ನು ಕಳೆದುಕೊಳ್ಳದಿರುವುದೇ ಈ ಹೊತ್ತಿನ ವಿವೇಕವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಚಿಂತಕಿ ಮೀನಾಕ್ಷಿ ಬಾಳಿ ಮಾತನಾಡಿ, ‘ಕಲ್ಯಾಣ ಕರ್ನಾಟಕ ಪ್ರದೇಶವು ಭಾಷಾ ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಅತ್ಯಂತ ಪ್ರಾಚೀನ ಕಾಲದಿಂದಲೂ ಕನ್ನಡವು ತೆಲುಗು, ತುಳು, ತಮಿಳು ಇತ್ಯಾದಿ ಸಹೋದರಿ ಭಾಷೆಗಳಲ್ಲದೆ ಉರ್ದುವಿನಂತಹ ಸೌಷ್ಟವಪೂರಿತ ಭಾಷೆಯೊಂದಿಗೂ ಸಾಮರಸ್ಯ ಸಾಧಿಸಿದೆ. ದಖ್ಖನಿ ಉರ್ದುವಿನ ನೆಲೆಯಾದ ಕಲಬುರಗಿಯೂ ಉತ್ಕೃಷ್ಟ ಉರ್ದು ಕೃತಿಗಳನ್ನು ನೀಡಿದೆ. ಇಲ್ಲಿನವರ ಸಮಸಂಸ್ಕೃತಿಯ ದ್ಯೋತಕ’ ಎಂದು ಹೇಳಿದರು.

ಪತ್ರಾಗಾರ ಕಚೇರಿಯ ಉಪನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ ಮಾತನಾಡಿ, ‘ಕನ್ನಡ ರಂಗಭೂಮಿಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಅದು ಈ ಶತಮಾನಗಳ ಉದ್ದಕ್ಕೂ ಧರ್ಮಾತೀತವಾಗಿಯೇ ಉಳಿದು ಬಂದಿದೆ. ಕಳೆದ ಒಂದೆರೆಡು ದಶಕಕ್ಕೂ ಮೊದಲು ಅದು ಯಾಹೊತ್ತಿಗೂ ಸಾಂಸ್ಕೃತಿಕ ರಾಜಕಾರಣದ ಹೊರತಾಗಿಯೇ ಉಳಿದಿತ್ತು. ಆದರೆ, ವಿಪರ್ಯಾಸವೆಂದರೆ ಇತ್ತಿಚೆಗೆ ರಂಗಭೂಮಿಗೂ ಧರ್ಮದ ನಂಜನ್ನು ಲೇಪಿಸುವ ಕೆಲಸವನ್ನು ಬಹಳ ಮುಕ್ತವಾಗಿ ವರ್ತಮಾನದ ರಾಜಕಾರಣ ಮಾಡುತ್ತಿರುವುದು ಅತ್ಯಂತ ಖೇದಕರ ಸಂಗತಿ’ ಎಂದರು.

ರಂಗಾಯಣದ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಮಾತನಾಡಿ, ‘ಪ್ರತಿ ಭಾಷೆಗೂ ಒಂದು ಅಂತಃಸತ್ವ ಇದೆ. ಪ್ರತಿ ಭಾಷೆಯೂ ಪ್ರೀತಿಯಿಂದ ಕೂಡಿದೆ. ಕೊಡುವ ಮತ್ತು ತೆಗೆದುಕೊಳ್ಳುವ ಬಹುಭಾಷಿಕ, ಆಯಾಮಗಳಿಂದ ಒಂದು ನೆಲದ ಸಂಸ್ಕೃತಿ ಹೆಮ್ಮರವಾಗಿ ಬೆಳೆಯಬಲ್ಲದು. ಭಾಷೆಯ ಮಿತಿಗಳನ್ನು ಮೀರಿ ಕನ್ನಡದ ನೆಲ ಎಲ್ಲವನ್ನು ಹೀರಿಕೊಂಡು ಬೆಳೆದಿದೆ. ಇನ್ನೊಂದನ್ನು ಸ್ವೀಕರಿಸುತ್ತಾ ನಮ್ಮದನ್ನು ಉಳಿಸಿಕೊಳ್ಳುತ್ತಾ ಬಹುತ್ವದ ದಾರಿಯಲ್ಲಿ ಸಾಗುವುದೇ ನಮಗೆ ಇರುವ ಅತ್ಯುತ್ತಮ ದಾರಿ. ಇಂತಹ ಬಹುತ್ವದ ಸಂಸ್ಕೃತಿಯನ್ನು ಬೆಳೆಸಲು ಹಲವು ಸೋದರ ಭಾಷೆಗಳ ಜೊತೆಗೆ ಸೇರಿ ಹಮ್ಮಿಕೊಂಡಿರುವ ಉತ್ಸವವೇ ಬಹುಭಾಷಾ ನಾಟಕೋತ್ಸವವಾಗಿದೆ’ ಎಂದು ಹೇಳಿದರು.

ಇತ್ತೀಚೆಗೆ ಕೋಮುವಾದಿ ರಾಜಕಾರಣದ ಪಿಡುಗಿನಿಂದಾಗಿ ಉರ್ದುವಿನಂಥ ಭಾಷೆಯನ್ನು ಅಲ್ಪಸಂಖ್ಯಾತರೊಂದಿಗೆ ತಳಕು ಹಾಕಿ ದ್ವೇಷ ಹುಟ್ಟಿಸಲಾಗುತ್ತಿದೆ. ಭಾಷೆಗೆ ಧರ್ಮವಿರುವುದಿಲ್ಲ; ಪ್ರದೇಶವಿರುತ್ತದೆ.

-ದಖ್ಖನಿ ಉರ್ದು ನಮ್ಮ ನೆಲದ ಭಾಷೆ ಮೀನಾಕ್ಷಿ ಬಾಳಿ ಚಿಂತಕಿ