‘ನಗರದ ಹೊರವಲಯದ ಉದನೂರ ಗ್ರಾಮದ ಘನ ತ್ಯಾಜ್ಯ ಕಸ ವಿಲೇವಾರಿ ಸಂಗ್ರಹಣಾ ಘಟಕದಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇತ್ತೀಚೆಗೆ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ’ ಎಂದು ಶೋಭಾ ದೇಸಾಯಿ ತಿಳಿಸಿದರು. ಈ ಘಟನೆಗಳಿಂದ ವಿಷಕಾರಿ ಹೊಗೆ ವಾತಾವರಣದಲ್ಲಿ ಹರಡಿ ಉದನೂರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಘಟನೆ ಕುರಿತು ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.