ಗುರುವಾರ , ಜನವರಿ 28, 2021
23 °C

‘ಸಂಗೀತದಿಂದ ಮಾನಸಿಕ ನೆಮ್ಮದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರವಾರ: ‘ಭಕ್ತಿಗೀತೆ ಹಾಗೂ ಸಂಗೀತ ಆಲಿಸುವುದರಿಂದ ಮಾನಸಿಕ ಒತ್ತಡಗಳು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಪ್ರತಿಯೊಬ್ಬರೂ ಸಂಗೀತ ಕೇಳುವುದನ್ನು ರೂಢಿಸಿಕೊಳ್ಳಬೇಕು’ ಚನ್ನಯ್ಯಸ್ವಾಮಿ ಹಿರೇಮಠ ಸಲಹೆ ನೀಡಿದರು.

ತಾಲ್ಲೂಕಿನ ಶಾಖಾಪೂರು ಗ್ರಾಮದ ದಂಡಗುಂಡ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಂಜಾರ ಸಂಸ್ಕೃತಿ ಕಲಾ ಮಂಡಳಿ ಮತ್ತು ನೆಹರೂ ಯುವ ಕೇಂದ್ರದ ಸಹಯೋಗದಲ್ಲಿ ಭಾನುವಾರ ನಡೆದ ಸಂಸ್ಕೃತಿ-ಸಂಭ್ರಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುಗಮ ಸಂಗೀತ ಗಾಯಕ ಅಂಬರೇಶ ಸಾಲಿಮಠ, ಮಹಾಂತೇಶ, ವೆಂಕಟೇಶ, ಕೇಶವ ಕಮ್ಮಾರ, ಮರಿಯಪ್ಪ ತಿಪ್ಪಲದಿನ್ನಿ ಅವರು ಸುಗಮ ಸಂಗೀತ, ಜಾನಪದ, ತತ್ವಪದ, ಭಜನಾಪದ, ಸಂಪ್ರದಾಯಿಕ ಹಾಡು, ಜೋಗುಳ ಪದ, ಭಾವಗೀತೆ ಸೇರಿದಂತೆ ವಿವಿಧ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮ‌ ನಡೆಸಿಕೊಟ್ಟರು.

ನೆಹರೂ ಯುವ ಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ಉಚಿತ ಮಾಸ್ಕ್, ಸ್ಯಾನಿಟೈಸರ್, ಜ್ಯೂಸ್ ವಿತರಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಶಂಕರಗೌಡ, ಮೌನೇಶ ನಾಯಕ, ಸಿರವಾರ ಬಸವೇಶ್ವರ ಕಾಲೇಜು ಪ್ರಾಚಾರ್ಯ ಧರ್ಮಣ್ಣ, ಉಪನ್ಯಾಸಕ ಹನುಮಂತ ಅತ್ತನೂರು, ನೆಹರೂ ಯುವ ಕೇಂದ್ರದ ಸಂಯೋಜಕ ಮುತ್ತಣ್ಣ ಅತ್ತನೂರು, ಸುರೇಶ್ ಪಾಟೀಲ, ಮುತ್ತನಗೌಡ, ಮಹಿಳೆಯರು, ಮಕ್ಕಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.