ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಾಫ್‌ ಸಮಾಜದ ಗ್ರಾ.ಪಂ. ಸದಸ್ಯರಿಗೆ ಸನ್ಮಾನ

Last Updated 17 ಮಾರ್ಚ್ 2021, 16:03 IST
ಅಕ್ಷರ ಗಾತ್ರ

ಕಲಬುರ್ಗಿ: ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ನದಾಫ್‌, ಪಿಂಜಾರ ಸಮುದಾಯದ ನೂತನ ಸದಸ್ಯರನ್ನುಕರ್ನಾಟಕ ರಾಜ್ಯ ನದಾಫ್‌, ಪಿಂಜಾರ ಸಂಘದ ವತಿಯಿಂದ ಬುಧವಾರ ಸನ್ಮಾನಿಸಲಾಯಿತು.

‌ನಗರದ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಸದ್ದಾಂ ವಜೀರಗಾಂವ್ ಚಿಂಚೋಳಿ ಮಾತನಾಡಿ, ‘ಹಲವಾರು ತಾಲ್ಲೂಕು ಕೇಂದ್ರಗಳಲ್ಲಿ ನದಾಫ್‌, ಪಿಂಜಾರ ಸಮುದಾಯದವರಿಗೆ ಪ್ರವರ್ಗ 1ರ ಜಾತಿ ಪ್ರಮಾಣಪತ್ರವನ್ನು ನೀಡಲು ಸತಾಯಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಅವರು ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಕಲ್ಯಾಣ ಕರ್ನಾಟಕ ವಿಭಾಗೀಯ ಸಂಚಾಲಕ ಮೌಲಾಲಿ ನದಾಫ್‌, ಜಿಲ್ಲಾ ಘಟಕದ ಅಧ್ಯಕ್ಷ ಉಮರ್‌ ನದಾಫ್‌, ಸಂಘದ ಮುಖಂಡರಾದ ಮಹ್ಮದ್ ಆಸೀಫ್ ಅತನೂರ, ಮೆಹಬೂಬ ನದಾಫ್‌, ಯುಸೂಫ್‌ನದಾಫ್‌, ಇಸ್ಮಾಯಿಲ್ ನದಾಫ್‌, ಇಮ್ರಾನ್ ನದಾಫ್‌, ಅಮೀನ್ ಸಾಬ್ ನದಾಫ್‌ ಇದ್ದರು.

ಕಾರ್ಯಕ್ರಮದಲ್ಲಿ ನಿಪ್ಪಾಣಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಫ್ರಿನ್ ಬೇಗಂ, ಹರವಾಳ ಗ್ರಾ.ಪಂ. ಉಪಾಧ್ಯಕ್ಷೆ ಬಿಸ್ಮಿಲ್ಲಾ ಬೇಗಂ ನದಾಫ್‌, ಅತನೂರ ಗ್ರಾಮ ಪಂಚಾಯಿತಿ ಸದಸ್ಯ ಮೆಹಮೂದ್, ಪಸ್ತಾಪೂರ ಗ್ರಾ.ಪಂ. ಸದಸ್ಯ ಅಜೀಜ್ ನದಾಫ್‌, ಶಾದಿಪುರದ ರಿಯಾಜ್ ನದಾಫ್‌, ಉದನೂರಿನ ರಿಯಾನಾ ಬೇಗಂ, ಕಮಲಾನಗರದ ರಫೀಕ್ ಖಾನ್ ನದಾಫ್‌, ಮಲ್ಲಾಬಾದ್‌ನ ಮೆಹಬೂಬಸಾಬ್ ನದಾಫ್‌, ತೇಲಗಿಯ ತನುಬೀ ಅಪ್ಪಾಸಾಬ್ ನದಾಫ್‌, ಅಹ್ಮದ್ ಅಲಿ ನದಾಫ್‌, ಸಾವಳಗಿಯ ಉಸ್ಮಾನ್ ಸಾಬ್ ನದಾಫ್‌, ಶಿಬಾರಸಾಬ್ ನದಾಫ್‌, ಯಡ್ರಾಮಿಯ ನಬಿಸಾಬ್ ನದಾಫ್‌, ಟೆಂಗಳಿಯ ಮಹಮ್ಮದ್ ನದಾಫ್‌ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT