ಶುಕ್ರವಾರ, ಮೇ 20, 2022
25 °C

ಪ್ರಧಾನಿ ಮೋದಿಗೆ ಬರೀ ಮತಗಳ ಚಿಂತೆ: ಮಲ್ಲಿಕಾರ್ಜುನ ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಸಂಸತ್ ಅಧಿವೇಶನದ ವೇಳೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರಿಗೆ ಅಧಿವೇಶನದ ಚರ್ಚೆಗಳಿಗಿಂತ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಮತಗಳನ್ನು ಕೊಡಿಸುವುದೇ ಚಿಂತೆಯಾಗಿದೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಜೇವರ್ಗಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಹಿಂದಿನ ಯಾವ ಪ್ರಧಾನಿಯೂ ಅಧಿವೇಶನವನ್ನು ನಿರ್ಲಕ್ಷಿಸಿದ್ದನ್ನು ನಾನು ಕಂಡಿಲ್ಲ’ ಎಂದು ಟೀಕಿಸಿದರು. 

‘ಸರ್ಕಾರಿ ಕಾರ್ಯಕ್ರಮವನ್ನು ಮೋದಿ ಅವರು ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಂಡರು. ಅಲ್ಲದೆ ಪಕ್ಷದ ಕಾರ್ಯಕ್ರಮವಾಗಿ ರೂಪಿಸಿದರು. ಮೊದಲ ದಿನ ಕಲಾಪಕ್ಕೆ ಬಂದು ಹೋದವರು ನಾಪತ್ತೆಯಾದರು’ ಎಂದು ಟೀಕಿಸಿದರು.

‘ಮೋದಿ ಹಾಗೂ ಬಿಜೆಪಿಯವರು ಡಾ. ಬಿ.ಆರ್‌.ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ನೆಹರೂ, ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದ ಭದ್ರ ಬುನಾದಿಯನ್ನು ಹಾಕಿದ್ದರು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು