ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹತ್ವಾಕಾಂಕ್ಷಿ ತಾಲ್ಲೂಕು: ದಕ್ಷಿಣ ಭಾರತಕ್ಕೆ ಕಾಳಗಿ ದ್ವಿತೀಯ

Published 28 ಆಗಸ್ಟ್ 2024, 4:49 IST
Last Updated 28 ಆಗಸ್ಟ್ 2024, 4:49 IST
ಅಕ್ಷರ ಗಾತ್ರ

ಕಲಬುರಗಿ: ನೀತಿ ಆಯೋಗದ ಮಹತ್ವಾಕಾಂಕ್ಷಿ ತಾಲ್ಲೂಕು ಕಾರ್ಯಕ್ರಮದಲ್ಲಿ ತೋರಿದ ಸುಧಾರಣೆಗಾಗಿ ಜಿಲ್ಲೆಯ ಕಾಳಗಿ ತಾಲ್ಲೂಕು ದಕ್ಷಿಣ ಭಾರತದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ನೀತಿ ಆಯೋಗದ ಮಹತ್ವಾಕಾಂಕ್ಷಿ ತಾಲ್ಲೂಕುಗಳ ಶ್ರೇಯಾಂಕ ಪಟ್ಟಿಯ ದಕ್ಷಿಣ ಭಾರತ ವಲಯದಡಿ ಆಂಧ್ರಪ್ರದೇಶದ ಭಾಮಿನಿ ತಾಲ್ಲೂಕು ಪ್ರಥಮ ಸ್ಥಾನ ಗಳಿಸಿದರೆ, ಕಾಳಗಿ ಎರಡನೇ ಶ್ರೇಯಾಂಕ ಪಡೆಯಲು ಸಫಲವಾಗಿದೆ.

ಶಿಕ್ಷಣ, ಆರೋಗ್ಯ, ಕೌಶಲ, ಮಹಿಳಾ ಮತ್ತು ಮಕ್ಕಳು, ಕೃಷಿ ಸೇರಿದಂತೆ ಜನರ ಜೀವನ ಮಟ್ಟದ ಸುಧಾರಣೆಯ ನಿಟ್ಟಿನಲ್ಲಿ ಕಾಳಗಿಯಲ್ಲಿ ಉತ್ತಮವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ, ಎರಡನೇ ಶ್ರೇಯಾಂಕ ಲಭಿಸಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮಹತ್ವಾಕಾಂಕ್ಷೆ ತಾಲ್ಲೂಕುಗಳ ಪಟ್ಟಿಯಲ್ಲಿ ಅಫಜಲಪುರ ಹಾಗೂ ಶಹಾಬಾದ್‌ ಗುರುತಿಸಲಾಗಿತ್ತು. ಆದರೆ, ಕಾಳಗಿಗೆ ಈ ಶ್ರೇಯಾಂಕ ದೊರೆತಿದೆ. ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಅಧಿಕಾರಿಗಳನ್ನು ಆಹ್ವಾನಿಸಿ, ಪ್ರಮಾಣ ಪತ್ರ ನೀಡಲಾಗುವುದು. ತಾಲ್ಲೂಕಿಗೆ ಹೆಚ್ಚಿನ ಅನುದಾನವೂ ಲಭಿಸಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT