ಕಲಬುರಗಿ: ತಾಲ್ಲೂಕಿನ ಇಟಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸರ್ಕಾರಿ ಶಾಲಾ ಕಟ್ಟಡಕ್ಕೆ ಗ್ರಾಮದ ನಿವಾಸಿ ನಿಜಾಮೊದ್ದೀನ್ ಪಟೇಲ್ ಅವರು ತಮ್ಮ 33 ಗುಂಟೆ ಜಾಗವನ್ನು ದಾನವಾಗಿ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಇಟಗಾ ಅಹಮದಬಾದ್ ಗ್ರಾಮದ ಸರ್ವೆ ನಂ 73/6ರಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ 33 ಗುಂಟೆ ಜಾಗವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಶಾಲೆ ನಿರ್ಮಾಣಕ್ಕೆ ದಾನ ನೀಡಿದ್ದರಿಂದ ಅಲ್ಲಿನ ಮಕ್ಕಳು ತಮ್ಮ ಊರಿನಲ್ಲೇ ಶಿಕ್ಷಣ ಪಡೆಯುವಂತಾಗಿದೆ.

ಶಾಲಾ ಕಟ್ಟಡಕ್ಕೆ ಚಾಲನೆ ನೀಡಲು ಗ್ರಾಮಕ್ಕೆ ಬಂದಿದ್ದ ಶಾಸಕ ಬಸವರಾಜ ಮತ್ತಿಮಡು ಅವರು ಜಾಗದ ದಾನಿ ನಿಜಾಮೊದ್ದೀನ್ ಪಟೇಲ್ ಅವರನ್ನು ಸನ್ಮಾನಿಸಿದರು.

ಆರ್ಎಂಎಸ್ಎ ಯೋಜನೆಯಡಿ ₹ 1.29 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣಗೊಳ್ಳಲಿದೆ.

ಬಿಇಒ ಸೋಮಶೇಖರ ಹಂಚಿನಾಳ, ಭೂಪಾಲ ತೆಗನೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ತುರಾಜ ಎಂ. ಶೇಳ್ಳಗಿ, ಬಿಜೆಪಿ ಎಸ್ಟಿ ಮೊರ್ಚಾ ಗ್ರಾಮೀಣ ಮಂಡಲ ಅಧ್ಯಕ್ಷ ದೇವು ಎನ್. ಜಮಾದಾರ, ಎಇಇ ಶರಣಪ್ಪ ಹಿರೇಮಠ, ವಿನೋದ ಪಾಟೀಲ, ವಿಶ್ವನಾಥ ಪಾಟೀಲ ಬೇನೂರ, ರೇವಣ್ಣಸಿದ್ದಪ್ಪ ಹರಸೂರ, ಚನ್ನವೀರಯ್ಯ ಹಿರೇಮಠ, ಚನ್ನಬಸಪ್ಪ ದೇಸಾಯಿ, ಕಾಶಿನಾಥ ದೇವಟಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.