ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಡಕಪಳ್ಳಿ: ಮಾರುತೇಶ್ವರ ದೇವರ ಪಲ್ಲಕ್ಕಿ ಉತ್ಸವ

Published : 8 ಸೆಪ್ಟೆಂಬರ್ 2024, 15:48 IST
Last Updated : 8 ಸೆಪ್ಟೆಂಬರ್ 2024, 15:48 IST
ಫಾಲೋ ಮಾಡಿ
Comments

ಚಿಂಚೋಳಿ: ತಾಲ್ಲೂಕಿನ ಬೆಡಕಪಳ್ಳಿ ಗ್ರಾಮದಲ್ಲಿ ಭಾನುವಾರ ಸಡಗರ ಮಾರುತೇಶ್ವರ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.

ಶ್ರಾವಣ ಸಮಾರೋಪ ಪ್ರಯುಕ್ತ ಗ್ರಾಮದ ಮಾರುತೇಶ್ವರ ದೇವರ ಖಾಂಡ(ಮಹಾ ಪ್ರಸಾದ) ಶನಿವಾರ ನಡೆಯಿತು. ಭಾನುವಾರ ಗ್ರಾಮಸ್ಥರು ಭಾನುವಾರ ಪಲ್ಲಕ್ಕಿ ಉತ್ಸವದ ಮೂಲಕ ಶ್ರಾವಣ ಮಾಸಕ್ಕೆ ತೆರೆ ಎಳೆದರು.

ಗ್ರಾಮದ ಮಾರುತೇಶ್ವರ ಮಂದಿರದಿಂದ ಮುಖ್ಯಬೀದಿಗಳಲ್ಲಿ ಸಂಚರಿಸಿತು. ಡೊಳ್ಳು, ಭಜನೆ ಸೇವೆಯೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು.

ಉತ್ಸವದಲ್ಲಿ ಮುಖಂಡ ಮಹಾದೆವಪ್ಪಾ ಪಾಟೀಲ, ಚಂದ್ರಶೇಖರರಡ್ಡಿ ಪಾಟೀಲ, ಮಲ್ಲಿಕಾರ್ಜುನ ಪಾಲಾಮೂರ, ನರಸಿಂಹರಡ್ಡಿ ಬಾಯರಡ್ಡಿ, ರಾಜು ಉಪ್ಪಿನ, ಲಕ್ಷ್ಮಣ ಇಮುಡಾಪೂರ, ಗೋಪಾಲ ರಾಂಪೂರೆ, ವಿಠಲ ಮಲಶೆಟ್ಟಿ, ಕಲ್ಯಾಣರಾವ ದಳಪತಿ, ನಾಗಪ್ಪ ಹೋಗಾಡಿ, ಮೊಗಲಪ್ಪ ಹೋಗಾಡಿ, ಮಾರುತಿ ಭಂಡಾರಿ, ಅವಿನಾಶ ಬೋರಂಚಿ, ಬಸವರಾಜ ಬೂತಾಳಿ, ಬಸವರಾಜ ಮಡಿವಾಳ, ರಾಜು ಪೂಜಾರಿ, ಶ್ರೀನಿವಾಸ ಬಹುರೂಪಿ, ಸಾಯಬಣ್ಣ ಸುಲಿಗೇಮಿ ಮುಂತಾದವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT