ಕಲಬುರ್ಗಿ: ಲಾಕ್‌ಡೌನ್ ಸಂದರ್ಭದಲ್ಲಿ ದಿನಸಿ ಪದಾರ್ಥ ಹಾಗೂ ಇತರೆ ದಿನನಿತ್ಯದ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಿದ ಆರೋಪದ ಮೇರೆಗೆ, ಶುಕ್ರವಾರ ವಿವಿಧೆಡೆ ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಿದ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ₹ 66 ಸಾವಿರ ದಂಡ ವಸೂಲಿ ಮಾಡಿದ್ದಾರೆ.

ನಗರ ಹಾಗೂ ವಿವಿಧ ತಾಲ್ಲೂಕುಗಳಲ್ಲಿನ ಕಿರಾಣಿ ಬಜಾರ್, ಸೂಪುರ್ ಮಾರ್ಕೆಟ್, ಎಪಿಎಂಸಿ, ನೆಹರೂ ಗಂಜ್‌ನ ಸಟಗು ಹಾಗೂ ಚಿಲ್ಲರೆ ವ್ಯಾಪಾರಸ್ಥರ ಮಳಿಗೆಗಳ ತಪಾಸಣೆ ನಡೆಸಿದ್ದಾರೆ. ಪೊಟ್ಟಣ ಸಾಮಗ್ರಿ ಅಧಿನಿಯಮ 2011ರ ಉಲ್ಲಂಘನೆ ಮಾಡಿದ ಕೆಲವು ಅಂಗಡಿಕಾರರ ಮೇಲೆ ಅಭಿಸಂದಾನದ ದಂಡ ವಿಧಿಸಲಾಗಿದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರಫೀಕಸಾಬ್ ಲಾಡಜಿ ಅವರು ತಿಳಿಸಿದ್ದಾರೆ.

ಕಲಬುರ್ಗಿ ಕಾನೂನು ಮಾಪನಶಾಸ್ತ್ರ ಇಲಾಖೆಯ ನಿರೀಕ್ಷಕರಾದ ಅನಿಲಸಿಂಗ್, ಜಯರಾಜ್ ಸಿಂಗ್ ಹಾಗೂ ಅಶ್ವಥ ಜಿ. ಪತ್ತಾರ ಅವರನ್ನೊಳಗೊಂಡ ತಂಡವು ವಿವಿಧೆಡೆ 84 ತಪಾಸಣೆ ನಡೆಸಿ, 25 ಮೊಕದ್ದಮೆ ಹೂಡಿದೆ ಎಂದೂ ತಿಳಿಸಿದ್ದಾರೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಕಾನೂನು ಮಾಪನಶಾಸ್ತ್ರ ಇಲಾಖೆಯ ಕಚೇರಿಯ ದೂರವಾಣಿ ಸಂಖ್ಯೆ 08472 295856ಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.