ಕಲಬುರಗಿ: ಪ್ರಮುಖ ನಗರ ಅನಿಲ ವಿತರಣಾ ಸಂಸ್ಥೆಗಳಲ್ಲಿ ಒಂದಾಗಿರುವ ‘ಥಿಂಕ್ ಗ್ಯಾಸ್’ (ಹಿಂದಿನ ಎಜಿ ಅಂಡ್ ಪಿ ಪ್ರಥಮ್) ಕಂಪನಿಯು ಕಲಬುರಗಿ ಮತ್ತು ವಿಜಯಪುರದಲ್ಲಿ ಐದು ಸಾವಿರ ಮನೆಗಳಿಗೆ ಪೈಪ್ಲೈನ್ ಮೂಲಕ ನೈಸರ್ಗಿಕ ಅನಿಲ (ಡಿ-ಪಿಎನ್ಜಿ) ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ ಎಂದು ಕಂಪನಿಯ ಕಲಬುರಗಿ ಮತ್ತು ವಿಜಯಪುರ ವಲಯದ ಮುಖ್ಯಸ್ಥ ರಂಗರಾಜನ್ ಶೇಷಾದ್ರಿ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಳವೆ ಮೂಲಕ ಇಲ್ಲಿಯ ಜನರಿಗೆ ವಿಶ್ವಾಸಾರ್ಹ ಮತ್ತು ಪರಿಸರಸ್ನೇಹಿ ಇಂಧನ ಲಭಿಸಲಿದೆ. ಇದರ ಜೊತೆಗೆ ಥಿಂಕ್ ಗ್ಯಾಸ್ ನೂತನವಾಗಿ ನಾಲ್ಕು ಕಂಪನಿ ಮಾಲೀಕತ್ವದ, ಕಂಪನಿ ಚಾಲಿತ (ಕೋಕೊ-ಸಿಒಸಿಒ) ಸಿಎನ್ಜಿ ಕೇಂದ್ರಗಳನ್ನು ಸ್ಥಾಪಿಸಲಿದೆ. ಈ ಪ್ರದೇಶದ ಅರೆ–ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಇಂಧನಗಳ ಪ್ರವೇಶವನ್ನು ಮತ್ತಷ್ಟು ಹೆಚ್ಚಿಸಲು ಪ್ರತಿ ನಗರದಲ್ಲಿ ಎರಡು ಕೇಂದ್ರ ಸ್ಥಾಪನೆಯಾಗಲಿವೆ ಎಂದರು.

ಕಲಬುರಗಿ ನಗರದ ಓಂ ನಗರ, ವೀರೇಂದ್ರ ಪಾಟೀಲ ಬಡಾವಣೆ, ಗಣೇಶ ನಗರ, ಬಸವೇಶ್ವರ ಕಾಲೊನಿ, ಆದರ್ಶನಗರ, ಜಯನಗರ ಮತ್ತು ಪ್ರಗತಿ ಕಾಲೋನಿಗಳಲ್ಲಿನ 450 ಮನೆಗಳಿಗೆ ಡಿ–ಪಿಎನ್ಜಿ ಸಂಪರ್ಕ ಕಲ್ಪಿಸಲಾಗಿದೆ. ಆದರ್ಶ ನಗರ, ನೀಲಾ ನಗರ ಮತ್ತು ಆಶ್ರಮ ಪ್ರದೇಶದಲ್ಲಿ ಸಂಪರ್ಕ ವಿಸ್ತರಣೆಯಾಗಲಿದೆ ಎಂದು ಹೇಳಿದರು.

ಥಿಂಕ್ ಗ್ಯಾಸ್ನ ಮಾರುಕಟ್ಟೆ ಅಧಿಕಾರಿ ಪ್ರಯಾಗ್ ಮಿಶ್ರಾ ಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.