ಗುರುವಾರ , ಮಾರ್ಚ್ 30, 2023
32 °C

ಕಲಬುರಗಿ: ಬಸ್ ನಿಲ್ದಾಣದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಪುತ್ರನ ಬರ್ಬರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ಪೊಲೀಸ್ ಕಾನ್ ಸ್ಟೆಬಲ್ ಒಬ್ಬರ ಮಗನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಇಲ್ಲಿನ ವಿದ್ಯಾಸಾಗರ ನಿವಾಸಿ ಅಭಿಷೇಕ ಚಂದ್ರಕಾಂತ (27) ಎಂಬಾತನೇ ಕೊಲೆಯಾದ ಯುವಕ.

ಅಭಿಷೇಕ ಗುರುವಾರ ಬೆಳಿಗ್ಗೆ ಮನೆಯಿಂದ ಜಿಮ್ ಗೆ ಹೋಗುವುದಾಗಿ ಹೇಳಿ ಬಂದಿದ್ದ. ದಾರಿಯಲ್ಲಿ ಮಾರಕಾಸ್ತ್ರ ಹಿಡಿದ  ದುಷ್ಕರ್ಮಿಗಳು ಆತನನ್ನು  ಬೆನ್ನಟ್ಟಿದರು. ಇದನ್ನು ಗಮನಿಸಿದ ಅಭೀಷೇಕ ತನ್ನ ಬೈಕ್ ಬಸ್ ನಿಲ್ದಾಣ ಬಳಿ ನಿಲ್ಲಿಸಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ. ಸಹಾಯಕ್ಕಾಗಿ ಜನರ ಮಧ್ಯೆಯೂ ಓಡಿದ. ಆದರೆ ಬಸ್ ನಿಲ್ದಾಣ ಒಳಗೇ ಓಡಿ ಬಂದ ದುಷ್ಕರ್ಮಿಗಳು  ಆತನ ಕತ್ತು ಕೊಯ್ದು  ಪರಾರಿಯಾದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆ ಆರೋಪಿಗಳು ಹಾಗೂ ಕೊಲೆಯ ಕಾರಣ ಇನ್ನೂ ಗೊತ್ತಾಗಿಲ್ಲ ಎಂದು ಅಶೋಕ್ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಎಸಿಪಿ ಅಂಶಕುಮಾರ, ಇನ್ ಸ್ಪೆಕ್ಟರ್ ಪಂಡಿತ ಸಗರ ಹಾಗೂ ಸಿಬ್ಬಂದಿ ಬೇಟಿ ನೀಡಿದರು. ಅಶೋಕ್ ನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಿಗ್ಗೆ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು, ಸಿಬ್ಬಂದಿ, ಅಂಗಡಿಗಳ ವ್ಯಾಪಾರಿಗಳು ಈ ಘಟನೆ ನೋಡಿ ಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು