ಮಂಗಳವಾರ, ಜೂಲೈ 7, 2020
29 °C

ಕಲಬುರ್ಗಿ: ಪೊಲೀಸ್ ಇನ್‌ಸ್ಪೆಕ್ಟರ್‌ಗೂ ತಗುಲಿದ ಕೋವಿಡ್-19 ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕಲಬುರ್ಗಿ: ನಗರದ ಕಮಿಷನರೇಟ್ ವ್ಯಾಪ್ತಿಯ ಠಾಣೆಯೊಂದರ ಪೊಲೀಸ್ ಇನ್‍‌ಸ್ಪೆಕ್ಟರ್ ಒಬ್ಬರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ.

ಮೂರು ದಿನಗಳ ‌ಹಿಂದಷ್ಟೇ ವಿಶ್ವವಿದ್ಯಾಲಯ ಠಾಣೆ ಕಾನ್‌ಸ್ಟೆಬಲ್ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. 
 
ಕೋವಿಡ್-19 ತಡೆಯಲು ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್‌ಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ.

ಕೊರೊ‌ನಾ ಕಂಡು ಬಂದ ಸಿಪಿಐ ಅವರಿಗೆ ಕೆಮ್ಮು, ಜ್ವರ, ನೆಗಡಿ ಮೊದಲಾದ‌ ಯಾವುದೇ ಲಕ್ಷಣಗಳು ಇರಲಿಲ್ಲ. ಎಲ್ಲ ಪೊಲೀಸ್ ಸಿಬ್ಬಂದಿಗೆ ಪರೀಕ್ಷೆ ‌ಮಾಡುತ್ತಿರುವುದರಿಂದ ಇವರ ಗಂಟಲು ದ್ರವವನ್ನು ಕಳೆದ 25 ರಂದು ಸಂಗ್ರಹಿಸಲಾಗಿತ್ತು. ವರದಿ ದೃಢಪಟ್ಟ ಬೆನ್ನಲ್ಲಿಯೇ ನಗರದ ಐಸೊಲೇಶನ್ ಕೇಂದ್ರಕ್ಕೆ ಕಳಿಸಿಕೊಡಲಾಯಿತು.

ಈಗಾಗಲೇ ಎಲ್ಲ ಸಿಬ್ಬಂದಿ ಮಾದರಿಯನ್ನು ಸಂಗ್ರಹಿಸಲಾಗಿದೆ. ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು