ಬುಧವಾರ, ಡಿಸೆಂಬರ್ 8, 2021
27 °C

ಭಾಗ್ಯವಂತಿ ದೇವಿಗೆ 101 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಸಹಾಯಕರಾದ ತಹಶೀಲ್ದಾರ ಪಂಡಿತ ಬಿರಾದಾರ ಅವರು ಪ್ರವಾಹದಲ್ಲಿ ಸಿಲುಕಿದ್ದ ಕಾರ್ಯಾಚರಣೆ ಯಶಸ್ಸಿಯಾಗಿ ಪ್ರಾಣಾಪಾಯದಿಂದ ಪಾರಾಗಿ ಬಂದ ಹಿನ್ನೆಲೆಯಲ್ಲಿ, ತಾಲ್ಲೂಕಿನ ಪೋಲಕಪಳ್ಳಿಯ ಭಾಗ್ಯವಂತಿ ದೇವಿಗೆ ಮಿರಿಯಾಣ ಠಾಣೆಯ ಸಬ್ ಇನಸ್ಪೆಕ್ಟರ ಸಂತೋಷ ರಾಠೋಡ ಅವರು ಗುರುವಾರ 101 ತೆಂಗಿನ ಕಾಯಿ ಒಡೆದು ಹರಕೆ ಸಲ್ಲಿಸಿದರು.

ಡಿವೈಎಸ್ಪಿ  ಈ.ಎಸ್.ವೀರಭದ್ರಯ್ಯ ನೇತೃತ್ವದಲ್ಲಿ ಸರ್ಕಲ್ ಇನಸ್ಪೆಕ್ಟರ್ ಮಹಾಂತೇಶ ಪಾಟೀಲ ಹಾಗೂ ಚಿಂಚೋಳಿ ಠಾಣೆಯ ಸಬ್ ಇನಸ್ಪೆಕ್ಟರ್ ರಾಜಶೇಖರ ರಾಠೋಡ ಅವರು ಭಾಗ್ಯವಂತಿ ದೇವಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿ ಹೂಕಾಯಿ ಅರ್ಪಿಸಿದರು. ನಂತರ ಸಾಮೂಹಿಕವಾಗಿ 101  ತೆಂಗಿನಕಾಯಿ ಒಡೆದರು.

ಅಮವಾಸ್ಯೆ ವಿಶೇಷ ಪೂಜೆಯಲ್ಲಿಯೂ ಪೊಲೀಸರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಂಜುನಾಥ ಚೆಟ್ಟಿ, ಅಪ್ಪು, ಜಡೆಪ್ಪ, ಈಶ್ವರ, ಗಫಾರಸಾಬ, ಶಿವರಾಯ ಪಾಟೀಲ, ಲಕ್ಷ್ಮಣ, ಮೊಹಮದ್ ಮುಸ್ತಫಾ ಇತರರು ಇದ್ದರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು