ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯರ ಪೂರ್ವಾರಾಧನೆ ಸಂಭ್ರಮ

ರಾಘವೇಂದ್ರ ತೀರ್ಥರ 353ನೇ ಆರಾಧನಾ ಮಹೋತ್ಸವ, ಮಠಗಳಲ್ಲಿ ವಿಶೇಷ ಧಾರ್ಮಿಕ ಪೂಜೆ
Published 21 ಆಗಸ್ಟ್ 2024, 7:55 IST
Last Updated 21 ಆಗಸ್ಟ್ 2024, 7:55 IST
ಅಕ್ಷರ ಗಾತ್ರ

ಕಲಬುರಗಿ: ರಾಘವೇಂದ್ರ ತೀರ್ಥರ 353ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂಗಳವಾರ ನಗರದ ರಾಯರ ಮಠಗಳಲ್ಲಿ ರಾಯರ ಪೂರ್ವಾರಾಧನೆ ಸಂಭ್ರಮದಿಂದ ಜರುಗಿತು.

ನಗರದ ಬಿದ್ದಾಪುರ ಕಾಲೊನಿಯಲ್ಲಿರುವ ನಂಜನಗೂಡು ರಾಘವೇಂದ್ರಸ್ವಾಮಿಗಳ ಮಠ, ಬ್ರಹ್ಮಪುರದ ಉತ್ತರಾದಿಮಠ, ಜೇವರ್ಗಿ ಕಾಲೊನಿಯ ರಾಘವೇಂದ್ರ ಸ್ವಾಮಿ ಮಠ, ಜಗತ್‌ ಬಡಾವಣೆಯ ಗೋಮುಖ ರಾಘವೇಂದ್ರ ಸ್ವಾಮಿ ಮಠ, ಬಸವೇಶ್ವರ ಕಾಲೊನಿಯ ರಾಯರ ಮಠ ಸೇರಿದಂತೆ ವಿವಿಧ ರಾಯರ ಮಠದಲ್ಲಿ ಪೂರ್ವಾರಾಧನೆ ಪ್ರಯುಕ್ತ ಸಡಗರ ಮನೆ ಮಾಡಿತ್ತು.

ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ, ಕ್ಷೀರ ಮತ್ತು ಫಲಪಂಚಾಮೃತ ಅಭಿಷೇಕ ಹಾಗೂ ಸಾಮೂಹಿಕ ಅಷ್ಟೋತ್ತರ ಪಾರಾಯಣ, ಪವಮಾನ ಹೋಮ, ಮಹಾನೈವೇದ್ಯ, ಅಲಂಕಾರ ಹಸ್ತೋದಕ, ರಜತ ಮಹೋತ್ಸವ, ಮಹಾಮಂಗಳಾರತಿ ಕಾರ್ಯಕ್ರಮ ಜರುಗಿದವು.

ಎನ್‌ಜಿಒ ಕಾಲೊನಿ: ಇಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪಾರಾಯಣ ಸಂಘದಿಂದ ಸಾಮೂಹಿಕ ಪಾರಾಯಣ, ಪವಮಾನ ಹೋಮ, ಪ್ರಸನ್ನ ಮಾರುತಿ ಭಜನಾ ಮಂಡಳಿ ವತಿಯಿಂದ ಭೋಜನ ಕಾಲದಲ್ಲಿ ತಾರತಮ್ಯ ಭಜನೆ, ದಾಸವಾಣಿ, ಪಲ್ಲಕ್ಕಿ ಸೇವೆ ಕಾರ್ಯಕ್ರಮಗಳು ಜರುಗಿದವು.

ಈ ವೇಳೆ ಗುರುರಾಜ ಆಚಾರ್ಯ ಕನಕಗಿರಿ, ಸಾಮಾಚಾರ್ಯ ಬೆಣಕಲ್‌, ಹರೀಶ ಆಚಾರ್ಯ, ಪದ್ಮನಾಭ ಆಚಾರ್ಯ, ಗುರುರಾಜ ದೇಸಾಯಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಬಿದ್ದಾಪುರ ಕಾಲೊನಿ: ಇಲ್ಲಿನ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಮಠದ ವ್ಯವಸ್ಥಾಪಕ ನರೇಂದ್ರ ಆಚಾರ್ಯ ಫರತಾಬಾದಕರ್‌, ಕಾರ್ಯದರ್ಶಿ ಪ್ರಶಾಂತ ಕೋರಳ್ಳಿ ಹಾಗೂ ಅರ್ಚಕರು ನೂರಾರು ಭಕ್ತರು ಭಾಗವಹಿಸಿದ್ದರು. ವಿವಿಧ ಮಹಿಳಾ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಬ್ರಹ್ಮಪುರ: ಇಲ್ಲಿನ ಉತ್ತರಾದಿ ಮಠದಲ್ಲಿ ಸಾಮೂಹಿಕ ಅಷ್ಟೋತ್ತರ, ನೂಪುರ ಸಂಸ್ಕೃತಿ ಸಂಸ್ಥೆಯಿಂದ ಭರತನಾಟ್ಯ, ರಜತ ಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ವೇಳೆ ಮಠದ ವ್ಯವಸ್ಥಾಪಕ ವಿನೋದಾಚಾರ್ಯ ಗಲಗಲಿ, ರಾಮಾಚಾರ್ಯ, ಸತ್ಯಾತ್ಮ ಸೇನೆ ಯುವಕರು, ಸತ್ಯಪ್ರಮೋದ ಯುವ ಸೇನೆ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನ್ಯೂ ರಾಘವೇಂದ್ರ ಕಾಲೊನಿಯ ವೆಂಕಟೇಶ ಕುಲಕರ್ಣಿಯವರ ಮನೆಯಲ್ಲಿ ಸತ್ಯಾನಂದ ಪಾರಾಯಣ ಸಂಘದ ವತಿಯಿಂದ ಲಕ್ಷ ಪುಷ್ಪಾರ್ಚನೆ ಹಾಗೂ ಶ್ರೀನಿವಾಸಾಚಾರ್ಯ ಪದಕಿಯವರಿಂದ ಉಪನ್ಯಾಸ ಜರುಗಿತು. ಈ ವೇಳೆ ಶ್ರೀನಿವಾಸಾಚಾರ್ಯ ಜೋಶಿ ನೆಲೋಗಿ, ಭಗವಾನರಾವ, ದಾಮೋದರರಾವ, ವಸಂತರಾವ, ಮನೋಹರರಾವ, ಸತ್ಯನಾರಾಯಣಚಾರ್ಯ ಉಪಸ್ಥಿತರಿದ್ದರು

ಪ್ರಶಾಂತ ನಗರ: ಇಲ್ಲಿನ ಹನುಮಾನ ಮಂದಿರದಲ್ಲಿ ರಾಘವೇಂದ್ರ ಸ್ವಾಮಿ ಪೂರ್ವಾರಾಧನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಅರ್ಚಕ ಗುಂಡಾಚಾರ್ಯ ನರಿಬೋಳ ನೇತೃತ್ವದಲ್ಲಿ ಅಷ್ಟೋತ್ತರ, ವಿಶೇಷ ಪೂಜೆ, ಪಲ್ಲಕಿ ಉತ್ಸವ, ನಂತರ ಪಂ.ಶ್ರೀನಿವಾಸಾಚಾರ್ಯ ಪದಕಿ ಅವರಿಂದ ಪ್ರವಚನ, ಹಸ್ತೋದಕ ಮಾಹಾಮಂಗಳಾರತಿ ನೆರವೇರಿತು.

ಜೀವಾ ಹೋಮಿಯೋಪತಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಶಾಮರಾವ, ಗೋಪಾಲರಾವ, ಅರುಣಕುಮಾರ, ಗುರುರಾಜ ಕುಲಕರ್ಣಿ, ಭೀಮಾಚಾರ್ಯ ಜೋಶಿ ಸೇರಿ ಮಹಿಳಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

ಕಲಬುರಗಿಯ ಎನ್‌ಜಿಒ ಕಾಲೊನಿಯಲ್ಲಿ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವದ ಪ್ರಯುಕ್ತ ತೀರ್ಥಪ್ರಸಾದ ಸ್ವೀಕರಿಸಿದರು
ಕಲಬುರಗಿಯ ಎನ್‌ಜಿಒ ಕಾಲೊನಿಯಲ್ಲಿ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವದ ಪ್ರಯುಕ್ತ ತೀರ್ಥಪ್ರಸಾದ ಸ್ವೀಕರಿಸಿದರು
ಕಲಬುರಗಿಯ ಎನ್‌ಜಿಒ ಕಾಲೊನಿಯ ರಾಯರ ಮೂರ್ತಿಗೆ ವಿಶೇಷ ಅಲಂಕಾರ
ಕಲಬುರಗಿಯ ಎನ್‌ಜಿಒ ಕಾಲೊನಿಯ ರಾಯರ ಮೂರ್ತಿಗೆ ವಿಶೇಷ ಅಲಂಕಾರ
ಕಲಬುರಗಿಯ ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ಪ್ರಯುಕ್ತ ಪಲ್ಲಕ್ಕಿ ಮೆರವಣಿಗೆ ನಡೆಯಿತು
ಕಲಬುರಗಿಯ ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ಪ್ರಯುಕ್ತ ಪಲ್ಲಕ್ಕಿ ಮೆರವಣಿಗೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT