ಕಲಬುರ್ಗಿ: ‘ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ವೈರಾಣು ಪರೀಕ್ಷೆಗಾಗಿ ನಗರದ ಇಎಸ್ಐಸಿ ಆಸ್ಪತ್ರೆಯಲ್ಲಿ ಮತ್ತೊಂದು ಪರೀಕ್ಷಾ ಕೇಂದ್ರ ತೆರೆಯಬೇಕು’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

‘ಪ್ರಸ್ತುತ ಜಿಮ್ಸ್ನಲ್ಲಿ ನಡೆಸಿದ ಪರೀಕ್ಷಾ ಕೇಂದ್ರದ ಯಂತ್ರಗಳು ಮಾರ್ಚ್ 23ರಿಂದ ದಿನದ 24 ಗಂಟೆಯೂ ಕಾರ್ಯನಿರ್ವಹಿಸಿವೆ. ಈಗ ಸೋಂಕು ನಿವಾರಣೆ ಕಾರ್ಯ ಹಾಗೂ ಯಂತ್ರಗಳ ಸರ್ವೀಸ್ ಮಾಡುವ ಅವಶ್ಯಕತೆ ಇದೆ. ಹಾಗಾಗಿ, ಜುಲೈ 12 ಹಾಗೂ 13ರಂದು ಯಾವುದೇ ಮಾದರಿಯನ್ನು ಸ್ವೀಕರಿಸುವುದಿಲ್ಲ, ಪರೀಕ್ಷೆಯನ್ನೂ ಮಾಡುವುದಿಲ್ಲವೆಂದು ಜಿಮ್ಸ್ನ ಸೋಂಕು ಪತ್ತೆ ಹಾಗೂ ಸಂಶೋಧನಾ ಕೇಂದ್ರದ ಪ್ರಧಾನ ಸಂಶೋಧಕರು, ಜಿಮ್ಸ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆದರೂ ರಾಜ್ಯ ಸರ್ಕಾರ ಬಾಯಿ ಮುಚ್ಚಿಕೊಂಡು ಕುಳಿತಿದೆ’ ಎಂದು ಅವರು ತಮ್ಮ ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.

‘ಈಗಾಗಲೇ ಸಾವಿರಾರು ಸಂಖ್ಯೆಯ ಮಾದರಿಗಳು ಪರೀಕ್ಷೆಯಾಗದೆ ಉಳಿದಿವೆ. ಈ ಹಂತದಲ್ಲಿ ಎರಡು ದಿನ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಮಾದರಿ ಸ್ವೀಕರಿಸದಿರುವುದು ಹಾಗೂ ಪರೀಕ್ಷೆ ನಡೆಸದಿರುವುದು ಸೋಂಕಿನ ಮಾದರಿಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲಿವೆ. ಸರ್ಕಾರ ಈ ಸಂದರ್ಭದಲ್ಲಿ ಮತ್ತೊಂದು ಪರೀಕ್ಷಾ ಮಾದರಿ ಕೇಂದ್ರವನ್ನು ಇಎಸ್ಐಸಿಯಲ್ಲಿ ಸ್ಥಾಪಿಸಿದ್ದರೆ ತ್ವರಿತಗತಿಯಲ್ಲಿ ಸೋಂಕು ಪತ್ತೆ ಕಾರ್ಯ ಮುಂದುವರಿಸಬಹುದಿತ್ತು. ಆದರೆ ಸರ್ಕಾರ ಈ ವಿಷಯದಲ್ಲಿ ವಿಫಲವಾಗಿದೆ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.