ಶನಿವಾರ, ಜುಲೈ 24, 2021
21 °C

ಅಂಬೇಡ್ಕರ್‌ ಮನೆ ಧ್ವಂಸ ಕೃತ್ಯಕ್ಕೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ರಾಜಗೃಹ ನಿವಾಸದ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ನಯ ಸವೇರಾ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಇಂಥ ವಿಕೃತ ಘಟನೆಗಳು ಭಾರತ ದೇಶದಲ್ಲಿ ಮಾತ್ರ ಸಾಧ್ಯ. ದೇಶವನ್ನು ರಕ್ಷಿಸುವ ಸಂವಿಧಾನವನ್ನು ಬರೆದ ಸಂವಿಧಾನಶಿಲ್ಪಿ ವಾಸವಿದ್ದ ಮನೆಗೆ ರಕ್ಷಣೆ ಇಲ್ಲವೆಂದರೆ ಈ ದೇಶದ ಸಾಮಾಜಿಕ ಮತ್ತು ಭದ್ರತಾ ವ್ಯವಸ್ಥೆಯ ಬಗ್ಗೆ ಏನು ಹೇಳುವುದು? ಹಲವು ವರ್ಷಗಳಿಂದ ಇಂಥ ಸಂಘಟಿತ ದಾಳಿಗಳು ಮರುಕಳಿಸುತ್ತಿವೆ. ಇಂಥ ಘಟನೆಗಳು ರಾಷ್ಟ್ರದ್ರೋಹದ ಪ್ರಕಾರಗಳೆಂದು ಪರಿಗಣಿಸಿ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಸಂಘಟನೆಯ ಅಧ್ಯಕ್ಷ ಮೋದಿನ ಪಟೇಲ್ ಅಣಬಿ ಒತ್ತಾಯಿಸಿದರು.

ಸಲೀಂ ಅಹ್ಮದ್ ಚಿತ್ತಾಪುರ, ಶೇಕ್ ಯುನೂಸ್‌ ಅಲಿ, ಸೈಯದ್ ಏಜಾಜ್ ಅಲಿ ಇನಾಂದಾರ, ಸಾದಿಕ್ ಪಟೇಲ್ ಯಳವಂತಗಿ, ಬಾಬಾ ಫಕ್ರುದ್ದಿನ್, ಗೀತಾ ಮುದಗಲ್, ಸಂಗೀತಾ ಪಾಟೀಲ್, ರಾಬಿಯಾ ಶಿಕಾರಿ,  ವಿಜಯಕುಮಾರ್, ಮುಬೀನ್ ಅನ್ಸಾರಿ, ಇಲಾಹಿ ಪಟೇಲ್ ಕುಳಗೇರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು