ಮಂಗಳವಾರ, ಜನವರಿ 28, 2020
19 °C

ಕಲಬುರ್ಗಿ | ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ ಆವರಣದೊಳಗೆ ಭಾನುವಾರ ರಾತ್ರಿ ದುಷ್ಮರ್ಮಿಗಳು ನುಗ್ಗಿ ಹಲ್ಲೆ ನಡೆಸಿದ ಘಟನೆ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (ಎಐಡಿಎಸ್ಒ) ಹಾಗೂ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಸಂಘಟನೆಗಳು ನಗರದಲ್ಲಿ ಸೋಮವಾರ ಸರಣಿ ಪ್ರತಿಭಟನೆ ನಡೆಸಿದವು.

‘ಗೂಂಡಾ ಸಂಸ್ಕೃತಿ ಹಿನ್ನೆಲೆಯ ಎಬಿವಿಪಿ ಕಾರ್ಯಕರ್ತರೇ ಈ ಘಟನೆಯ ಹಿಂದಿದ್ದಾರೆ. ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದ ದುಷ್ಕರ್ಮಿಗಳು ‌ಹೋಗುವುದು ಗೊತ್ತಿದ್ದರೂ ಪೊಲೀಸರು ಮೂಕ ಪ್ರೇಕ್ಷಕರಾಗಿ ನಿಂತಿರುವುದನ್ನು ನೋಡಿದರೆ ಕೇಂದ್ರದ ಕುಮ್ಮಕ್ಕಿರುವ ಸಂಶಯ ವ್ಯಕ್ತವಾಗುತ್ತದೆ’ ಎಂದು ಟೀಕಿಸಿದರು.

ಎಐಡಿಎಸ್ಒ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ ಎಚ್.ಎಸ್, ಕಾರ್ಯದರ್ಶಿ ಈರಣ್ಣ ಇಸಬಾ, ಎಸ್ ಎಫ್ ಐ ಜಿಲ್ಲಾ ಕಾರ್ಯದರ್ಶಿ ಸಿದ್ದಲಿಂಗ ಪಾಳಾ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜೇಂದ್ರ ರಾಜವಾಳ, ಕ್ಯಾಂಪಸ್ ‌ಫ್ರಂಟ್ ಆಫ್ ಇಂಡಿಯಾದ ಉಮೇರ್ ಜುನೈದಿ ನೇತೃತ್ವ ವಹಿಸಿದ್ದರು.


ಕಲಬುರ್ಗಿಯಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (ಎಐಡಿಎಸ್‌ಒ) ಕಾರ್ಯಕರ್ತರ ಪ್ರತಿಭಟನೆ

 

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು