ಕಲಬುರ್ಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾ ಕೇಂದ್ರವಾಗಿ ಇದ್ದ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಬದಲಾವಣೆ ಮಾಡಿ ಕಡಗಂಚಿ ಕ್ಷೇತ್ರವನ್ನಾಗಿ ಮರುವಿಂಗಡಣೆ ಮಾಡಿದ ಕ್ರಮ ಖಂಡಿಸಿ, ನಿಂಬರ್ಗಾ ಗ್ರಾಮಸ್ಥರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆದಿದರು.

ನಿಂಬರ್ಗಾ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಬಿಟ್ಟಿದ್ದರ ಹಿಂದೆ ಬೇರೆ ಉದ್ದೇಶವಿದೆ. ನಿಂಬರ್ಗಾ ಗ್ರಾಮವು 30 ಹಳ್ಳಿಗಳ ಸಂಪರ್ಕ ಹೊಂದಿರುವ ಕೇಂದ್ರ ಸ್ಥಳ.20 ಸಾವಿರ ಜನಸಂಖ್ಯೆ ಇರುವ ದೊಡ್ಡ ಗ್ರಾಮವಾಗಿದೆ. 9,253 ಮತದಾರರು ಇರುವ ಕೇಂದ್ರ ಸ್ಥಾನ. ಇಷ್ಟೆಲ್ಲ ಸಾಮರ್ಥ್ಯವಿದ್ದರೂ ಕ್ಷೇತ್ರವನ್ನು ಏಕೆ ಕೈ ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಂಬರ್ಗಾದಲ್ಲಿ ಉಪ ತಹಶೀಲ್ದಾರ್ ಕಚೇರಿ ಸೇರಿ ಎಲ್ಲ ಪ್ರಮುಖ ಕಚೇರಿಗಳು, ಶಾಲೆ, ಕಾಲೇಜುಗಳು, ಅಂಚೆ ಕಚೇರಿ, ಬ್ಯಾಂಕ್‌ಗಳು, ಅಮರ್ಜಾ ನೀರಾವರಿ ಯೋಜನೆ, ಐಟಿಐ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾ ಕೇಂದ್ರಗಳಿವೆ. ಆದ್ದರಿಂದ ಈ ಹಿಂದಿನಂತೆ ಕ್ಷೇತ್ರವನ್ನು ಉಳಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಗಳನ್ನು ಬಹಿಷ್ಕಾರ ಮಾಡಿ, ದೊಡ್ಡ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮುಖಂಡರಾದ ಶ್ರೀಶೈಲ್, ಅಮೃತ, ವಿಠ್ಠಲ್, ಮಲ್ಲಿನಾಥ ವಡೇರ್, ಪರಮೇಶ್ವರ, ಎನ್.ಸಿದ್ದರಾಮ, ರಮೇಶ ಚವ್ಹಾಣ, ಶ್ರೀಮಂತ, ಬಸವರಾಜ, ಸಾಯಬಣ್ಣಘಿ, ವಿಶ್ವನಾಥ ಪಾಟೀಲ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.