ಆಳಂದ: ‘ವಿದ್ಯಾರ್ಥಿಗಳು ಪರೀಕ್ಷೆ ಸಂದರ್ಭದಲ್ಲಿ ಮಾತ್ರ ಅಭ್ಯಾಸ ಕೈಗೊಳ್ಳದೇ ನಿರಂತರ ಅಧ್ಯಯನಶೀಲತೆ ಗುಣ ಬೆಳೆಸಿಕೊಂಡರೆ ಪರೀಕ್ಷೆಗಳಲ್ಲಿ ಸಾಧನೆ ಸಾಧ್ಯವಿದೆ’ ಎಂದು ಸಮತಾಲೋಕ ಶಿಕ್ಷಣ ಸಮಿತಿ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ತಿಳಿಸಿದರು.

ಪಟ್ಟಣದ ಸಂಬುದ್ಧ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಳಂದ ತಾಲ್ಲೂಕುಮಟ್ಟದ ಪಿಯು ದ್ವಿತೀಯ ವಿದ್ಯಾರ್ಥಿಗಳ ಪಠ್ಯಾಧಾರಿತ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಪಂಡಿತರಾವ ಪಾಟೀಲ ಮಾತನಾಡಿ, ‘ಎಸ್ಎಸ್ಎಲ್ಸಿ, ಪಿಯು ಪರೀಕ್ಷೆ ಬಗೆಗೆ ಭಯ ಬೇಡ. ಇಂತಹ ಸ್ಪರ್ಧೆಗಳು ಓದುವ ಹವ್ಯಾಸ ಬೆಳೆಸಲು ಸಹಾಯಕವಾಗಲಿವೆ’ ಎಂದು ಹೇಳಿದರು.

ಸರ್ಕಾರಿ ಕನ್ಯಾ ಪಿಯು ಕಾಲೇಜಿನ ಉಪನ್ಯಾಸಕ ಶ್ರೀಶೈಲ ಮಾಳಗೆ ಮಾತನಾಡಿ, ‘ಪಿಯು ದ್ವಿತೀಯ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ದಿಕ್ಸೂಚಿಯಾಗಲಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳು ಲಭಿಸಲು ಜ್ಞಾನದ ಹಸಿವು, ವಿಸ್ತಾರ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಪ್ರಾಂಶುಪಾಲ ಸಂಜಯ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಪಿಯು ಕಾಲೇಜಿನ ಪ್ರಾಚಾರ್ಯ ನಾಗಣ್ಣ ಸಲಗರೆ, ಗೋವಿಂದ ರಾಠೋಡ, ಶಿವಲಿಂಗಪ್ಪ ಸುತಾರ, ಆಶೀಫ್ ಕೋತ್ವಾಲ್, ಉಪನ್ಯಾಸಕರಾದ ಶರಣಮ್ಮ ಜಿ., ಸಿದ್ದರಾಮ ಸನಗುಂದಿ, ಮೃತ್ಯುಂಜಯ ಪಾಟೀಲ, ಧನರಾಜ ಬದಾಡೆ, ರೋಹಿಣಿ ಪಾಟೀಲ, ಮಹೇಶ ಪಾಟೀಲ, ಆಕಾಶ ಕಾಂಬಳೆ, ಗೀತಾ ಪಾಟೀಲ, ಜ್ಯೋತಿ ಕಲಬುರಗಿ, ಶರಣಬಸಪ್ಪ ಇಟಗಿ, ಶಿವಕುಮಾರ ಸೋನಾರ, ಶ್ರೀದೇವಿ ಉಪಸ್ಥಿತರಿದ್ದರು. ಸುರೇಶ ಪಾಟೀಲ ನಿರೂಪಿಸಿದರು. ಬಾಬುರಾವ ಚಿಕಣಿ ಸ್ವಾಗತಿಸಿದರು. ಇಕ್ಬಾಲ್ ಖಾನ್ ವಂದಿಸಿದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ತಾಲ್ಲೂಕಿನ ಒಟ್ಟು 20 ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಕಲಾ ವಿಭಾಗದಲ್ಲಿ ಕಡಗಂಚಿಯ ವಿದ್ಯಾವರ್ಧಕ ಪಿಯು ಕಾಲೇಜು ಮತ್ತು ವಿಜ್ಞಾನ ವಿಭಾಗದಲ್ಲಿ ರಾಮ ಮನೋಹರ ಲೋಹಿಯಾ ಕಾಲೇಜಿನ ವಿದ್ಯಾರ್ಥಿಗಳ ತಂಡವು ಪ್ರಥಮ ಸ್ಥಾನ ಪಡೆಯಿತು.

ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನವು ರಾಮ ಮನೋಹರ ಲೋಹಿಯಾ ಕಾಲೇಜಿನ ತಂಡಗಳು ಪಡೆಯುವ ಮೂಲಕ ಹೆಚ್ಚಿನ ಬಹುಮಾನ ಪಡೆದವು.

ಪಟ್ಟಣದ ಸರ್ಕಾರಿ ಬಾಲಕರ ಪಿಯು ಕಾಲೇಜು, ಸರ್ಕಾರಿ ಕನ್ಯಾ ಪಿಯು ಕಾಲೇಜು, ಮಹಾತ್ಮ ಗಾಂಧೀಜಿ ಕಾಲೇಜು , ವಿವೇಕ ವರ್ಧನಿ ಪಿಯು ಕಾಲೇಜು, ಮಾದನ ಹಿಪ್ಪರಗಿಯ ಶಿವಲಿಂಗೇಶ್ವರ ಪಿಯು ಕಾಲೇಜು, ಯಳಸಂಗಿ, ಮಾದನ ಹಿಪ್ಪರಗಿ, ನಿಂಬರ್ಗಾ ಸರ್ಕಾರಿ ಪಿಯು ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.