ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಹಿರೋಳ್ಳಿಯಲ್ಲಿ 104 ಮಿ.ಮೀ. ಮಳೆ

Published : 24 ಸೆಪ್ಟೆಂಬರ್ 2024, 4:30 IST
Last Updated : 24 ಸೆಪ್ಟೆಂಬರ್ 2024, 4:30 IST
ಫಾಲೋ ಮಾಡಿ
Comments

ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಗುಡುಗು ಸಹಿತ ಜೋರು ಮಳೆಯಾಗಿದ್ದು, ಆಳಂದ ತಾಲ್ಲೂಕಿನ ಹಿರೋಳ್ಳಿಯಲ್ಲಿ ಅತ್ಯಧಿಕ 104 ಮಿ.ಮೀ. ಮಳೆ ಬಿದ್ದಿದೆ.

ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಮಳೆ ಆಗಾಗ ಸುರಿಯುತ್ತಿದೆ. ಸೋಮವಾರ ಸಂಜೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಜನ, ವಾಹನ ಸಂಚಾರಕ್ಕೆ ಅಡಚಣೆಯಾಯಿತು. ತಗ್ಗು ಪ್ರದೇಶಗಳು, ಹಳ್ಳಗಳು ಜಲಾವೃತವಾದವು.

ಕುಸನೂರು, ಮೇಳಕುಂದಾ (ಬಿ) ಸೇರಿದಂತೆ ನಗರದ ಸುತ್ತಲಿನ ಹಲವು ಗ್ರಾಮಗಳ ಹಳ್ಳಗಳು ತುಂಬಿ ಹರಿದವು. ಜಮೀನುಗಳಲ್ಲಿ ನೀರು ನಿಂತಿದ್ದರಿಂದ ಕೃಷಿ ಚಟುವಟಿಕೆಗಳು ಸ್ಥಗಿತವಾದವು. ನಗರದ ರಸ್ತೆಗಳ ತಗ್ಗು ಪ್ರದೇಶದಲ್ಲಿಯೂ ಮಳೆ ಮತ್ತು ಚರಂಡಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಯಿತು.

ಅಫಜಲಪುರ ಪಟ್ಟಣ, ತಾಲ್ಲೂಕಿನ ಬಳೂರಗಿ, ಗೊಬ್ಬುರ (ಬಿ), ಚೌಡಾಪುರ, ಉಡಚಣ, ಆಳಂದ ತಾಲ್ಲೂಕಿನ ನಿಂಬಾಳ, ದರ್ಗಾಶಿರೂರು, ಲಾಡಮುಗಳಿ, ಮಾಡಿಯಾಳ, ಚಿತ್ತಾಪುರ, ಕಲಬುರಗಿ ತಾಲ್ಲೂಕಿನ ಫರಹತಾಬಾದ್, ಸರಡಗಿ, ಬಬಲಾದ, ಜೇವರ್ಗಿ, ಸೇಡಂ, ಶಹಾಬಾದ್, ಚಿಂಚೋಳಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ಮುನ್ಸೂಚನೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT