ಅಫಜಲಪುರ: ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಕುರಿತು ನಿರಂತರವಾಗಿ ಅವಹೇಳನ ಮಾಡುತ್ತಿರುವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಮುಖಂಡರು ಆಗ್ರಹಿಸಿದರು.

ಫೇಸ್ಬುಕ್ನಲ್ಲಿ ಗುಲಾಮರ ಅಪ್ಪ ಎನ್ನುವ ಪೇಜ್ ರಚಿಸಿಕೊಂಡಿರುವ ವ್ಯಕ್ತಿಯೊಬ್ಬ ನಿರಂತರವಾಗಿ ಅಂಬೇಡ್ಕರ್, ಮಹಾತ್ಮಗಾಂಧಿ, ಸಾವಿತ್ರಿಬಾಯಿ ಫುಲೆ, ಗೌತಮ ಬುದ್ದ, ಪೇರಿಯಾರ್ ಸೇರಿದಂತೆ ಸಮಾಜ ಸುಧಾರಕರ ಕುರಿತು ಅಶ್ಲೀಲ ಪದ ಬಳಕೆ ಮಾಡಿ ಪೊಸ್ಟ್ ಮಾಡುತ್ತಾನೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಕೂಡಲೇ ಪೇಜ್ ರಚಿಸಿದ ವ್ಯಕ್ತಿಯನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ದಲಿತ ಸೇನೆ ವಿಭಾಗೀಯ ಅಧ್ಯಕ್ಷ ಮಹಾಂತೇಶ ಬಳೂಂಡಗಿ, ಮುಖಂಡರಾದ ಭೀಮರಾವ್ ಗೌರ, ಮಹಾಂತೇಶ ಬಡದಾಳ, ರಮೇಶ ಸೂಲೆಕರ, ಪ್ರಮುಖರಾದ ವಿಠ್ಠಲ್ ಸಿಂಗೆ, ಸಂತೋಷ ಸಿಂಗೆ, ಶಿವು ಹೊಸಮನಿ, ಚಂದನ್, ದತ್ತು ಬಂಕಲಗಿ, ಜೈಭೀಮ್ ಗುಡ್ಡಡಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.