ಭಾನುವಾರ, ಜನವರಿ 24, 2021
24 °C

ರಾವೂರ ಬಳಿ ಭೀಕರ ಅಪಘಾತ: ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯ ‌ಚಿತ್ತಾಪುರ‌ ತಾಲ್ಲೂಕು ವಾಡಿ ಬಳಿಯ ರಾವೂರ ಗ್ರಾಮದ ಹೊರವಲಯದಲ್ಲಿ ಸೋಮವಾರ ನಸುಕಿನ ಜಾವ ‌ಸಂಭವಿಸಿದ ರಸ್ತೆ ಅಪಘಾತದಲ್ಲಿ ‌ಮೂವರು ಸಾವಿಗೀಡಾಗಿದ್ದಾರೆ.

ಸುಣ್ಣದ ಭಟ್ಟಿ ಬಳಿಯ ಮಾಣಿಕ ಗುದ್ಗಲ್ ಅವರ ಜಮೀನಿನ ಬಳಿ ಸಂಭವಿಸಿದ ಅಪಘಾತದಲ್ಲಿ
ರಾವೂರು ನಿವಾಸಿಗಳಾದ ಭೀಮಾಶಂಕರ ಸುಭಾಷ ಪ್ಯಾಟಿ, ಅಕ್ಬರ್ ಗೂಡು ಪಟೇಲ್ ಹಾಗೂ ಮತ್ತೊರ್ವ ಯುವತಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. 

ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ಕೃಷ್ಣಪ್ಪ ಕಲ್ಲೆದೇವರು ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು