ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಯಲ್ಲಿ ಮಾಹಿತಿ ಆಯೋಗದ ಪೀಠ ಆರಂಭ

Published 1 ಜನವರಿ 2024, 15:52 IST
Last Updated 1 ಜನವರಿ 2024, 15:52 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಹಲವು ವರ್ಷಗಳ ಬೇಡಿಕೆಯಾಗಿದ್ದ ಕರ್ನಾಟಕ ಮಾಹಿತಿ ಆಯೋಗದ ಪೀಠ ನಗರದಲ್ಲಿ ಸೋಮವಾರ ಆರಂಭಗೊಂಡಿದೆ. 

ಇಲ್ಲಿನ ರೈಲು ನಿಲ್ದಾಣದ ಬಳಿ ಇರುವ ಮಹಲ್–ಇ–ಶಾಹಿ ಅತಿಥಿಗೃಹದ ಆವರಣದಲ್ಲಿ ಹಳೆಯ ಅತಿಥಿಗೃಹವನ್ನು ಆಯೋಗಕ್ಕೆ ನೀಡಲಾಗಿದ್ದು, ಅದಕ್ಕೆ ಸುಣ್ಣ ಬಣ್ಣ ಬಳಿದು ನವೀಕರಿಸಲಾಗಿದೆ. ಆಯೋಗದ ಪೀಠ ಕಾರ್ಯಾರಂಭದ ಮೊದಲ ದಿನವಾದ ಸೋಮವಾರ ಆಯೋಗದ ಅಧಿಕಾರಿಗಳು ಭೇಟಿ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಠಕ್ಕೆ ಭೇಟಿ ನೀಡುವವರ ಅನುಕೂಲಕ್ಕಾಗಿ ಪಾರ್ಕಿಂಗ್, ಕುಳಿತುಕೊಳ್ಳುವ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಇನ್ನಷ್ಟೇ ಕಲ್ಪಿಸಬೇಕಿದೆ. ಪೀಠದ ಕಚೇರಿಯ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ಸೋಮವಾರವೂ ನಡೆದಿತ್ತು.

ಕಲಬುರಗಿ ಪೀಠದ ಮಾಹಿತಿ ಆಯುಕ್ತರನ್ನಾಗಿ ರವೀಂದ್ರ ಗುರುನಾಥ ಡಾಕಪ್ಪ ಅವರನ್ನು ನೇಮಕ ಮಾಡಲಾಗಿದೆ. ಆಯೋಗದ ಪೀಠವನ್ನು ಪಬ್ಲಿಕ್ ಗಾರ್ಡನ್ ಬಳಿ ಇರುವ ಹಳೆಯ ಲೋಕೋಪಯೋಗಿ ಕಚೇರಿಯ ಕಟ್ಟಡದಲ್ಲಿ ಆರಂಭಿಸುವ ಪ್ರಸ್ತಾವ ಇತ್ತು. ಅಂತಿಮವಾಗಿ ಮಹಲ್ –ಇ –ಶಾಹಿ ಅತಿಥಿಗೃಹದ ಆವರಣದಲ್ಲಿ ಆರಂಭಿಸಲಾಗಿದೆ. 

‘ಮಹಲ್ –ಇ– ಶಾಹಿಯಲ್ಲಿ ಆಯೋಗದ ಪೀಠವನ್ನು ಆರಂಭಿಸಿರುವುದರಿಂದ ಪ್ರಕರಣಗಳ ವಿಚಾರಣೆಗಾಗಿ ಬರುವ ದೂರುದಾರರಿಗೆ ತೊಂದರೆಯಾಗಲಿದೆ. ಜನರಿಗೆ ತಕ್ಷಣ ಬರಲು ಸಾಧ್ಯವಾಗುವ ಸ್ಥಳದಲ್ಲಿ ಪೀಠದ ಕಚೇರಿ ಆರಂಭಿಸಬೇಕಿತ್ತು‘ ಎಂದು ಹೈಕೋರ್ಟ್ ವಕೀಲ
ಪಿ. ವಿಲಾಸಕುಮಾರ್ ಒತ್ತಾಯಿಸಿದ್ದಾರೆ.

3 ದಿನ ವಿಚಾರಣೆ ರದ್ದು:

ಜನವರಿ 2ರಿಂದ 4ರವರೆಗೆ ಮಾಹಿತಿ ಆಯೋಗದ ಮುಂದೆ ನಿಗದಿಪಡಿಸಿದ್ದ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ ಎಂದು ಆಯೋಗದ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT