ಆಳಂದ: ತಾಲ್ಲೂಕಿನ ಸರಸಂಬಾ ಗ್ರಾಮದಲ್ಲಿ ದಯಾಲಿಂಗೇಶ್ವರರ 20ನೇ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.

ನಿರಗುಡಿ ಮಲ್ಲಯ್ಯ ಮುತ್ತ್ಯಾ ಅವರ ನೇತೃತ್ವದಲ್ಲಿ ನಡೆದ ಜಾತ್ರೆಯಲ್ಲಿ ಗಡಿಭಾಗದ ಗ್ರಾಮಗಳಿಂದ ಅಪಾರ ಸಂಖ್ಯೆಯ ಭಕ್ತರು ಭಾಗಿಯಾಗಿದ್ದರು.

ಗ್ರಾಮದ ಹೊರವಲಯದಿಂದ ಮಲ್ಲಯ್ಯ ಮುತ್ತ್ಯಾ ನಿರಗುಡಿ ಅವರನ್ನು ತೆರೆದ ಜೀಪ್ನಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಲಂಬಾಣಿ ಮಹಿಳೆಯರ ನೃತ್ಯ, ಡೊಳ್ಳು ಕುಣಿತ, ಲೇಜಿಮ್, ತಮಟೆ ಮತ್ತಿತರ ವಾದ್ಯಗಳ ಮೇಳಗಳು ಮೆರವಣಿಗೆಯ ಕಳೆ ಹೆಚ್ಚಿಸಿದ್ದವು.

ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ವಕ್ತಾರ ವೈಜುನಾಥ ಝಳಕಿ, ರೈತ ಮುಖಂಡ ದಯಾನಂದ ಪಾಟೀಲ ಮಾತನಾಡಿದರು.

ಪ್ರಮುಖರಾದ ಪ್ರಕಾಶ ಮುತ್ತ್ಯಾ, ಅಕ್ಕಲಕೋಟ ಜಿ.ಪಂ ಸದಸ್ಯ ಆನಂದ ತೋಂಡೆ, ಶ್ರೀಶೈಲ ತೋಮರೆ, ವಿಜಯಕುಮಾರ, ಶ್ರೀಶೈಲ ಪಾಟೀಲ, ಸಂತೋಷ ಬೋನೆ, ಸಂದೇಶ ಪವಾರ, ಸಿದ್ದಣ್ಣಾ ಹೂಗಾರ ಇದ್ದರು.

ರಾತ್ರಿ ಕುಸ್ತಿ ಸ್ಪರ್ಧೆಗಳು ನಡೆದವು. ಕಲಬುರಗಿ, ಬೀದರ್ ಜಿಲ್ಲೆ ಸೇರಿದಂತೆ ನೆರೆಯ ಸೋಲ್ಲಾಪುರ, ಉಮರ್ಗಾದಿಂದಲೂ ಕುಸ್ತಿ ಪೈಲ್ವಾನರು ಸ್ಪರ್ಧೆಗೆ ಆಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.