ಆಳಂದ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ನಿರ್ಮಿಸಲಾದ ಶಿರಪುರ ಮಾದರಿ ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹಗೊಂಡಿರುವುದನ್ನು ಶಾಸಕ ಬಿ.ಆರ್.ಪಾಟೀಲ ವೀಕ್ಷಿಸಿದರು
ಶಿರಪುರ ಮಾದರಿ ಜಲಸಂಗ್ರಹ ತಾಲ್ಲೂಕಿನಲ್ಲಿ ಯಶಸ್ವಿಯಾಗಿದೆ. ಮುಂಬರುವ ದಿನಗಳಲ್ಲಿ ಮಟಕಿ ಹೆಬಳಿ ತೀರ್ಥ ಗೋಳಾ ಹಳ್ಳಿ ಸಲಗರ ಬಸವಣ್ಣ ಸಂಗೋಳಗಿ ಮತ್ತಿತರ ಗ್ರಾಮದ ಹಳ್ಳಕ್ಕೂ ಕಾಮಗಾರಿ ವಿಸ್ತರಿಸಲಾಗುವುದು.
– ಬಿ.ಆರ್.ಪಾಟೀಲ, ಶಾಸಕ
ಚಿಂಚೋಳಿ ಗ್ರಾಮದ ಸುತ್ತಲಿನ ಹಳ್ಳವು ಸಂಪೂರ್ಣ ಭರ್ತಿಯಾಗಿದ್ದು ಇದರಂದ ಅಂತರ್ಜಲ ಹೆಚ್ಚಳವಾದರೆ ಈ ಭಾಗದಲ್ಲಿಯ ರೈತರೂ ಸಹ ತೋಟಗಾರಿಕೆ ತರಕಾರಿ ಬೆಳೆ ಬೆಳೆಯಲು ಅನುಕೂಲವಾಗಲಿದೆ.
– ಕಾಶಿನಾಥ ಫರತಾಪುರೆ, ರೈತ ಚಿಂಚೋಳಿ
ಶಿರಪುರ ಮಾದರಿ ಜಲಸಂಗ್ರಹದಿಂದ ನಾಗಲೇಗಾಂವ ಗ್ರಾಮದಲ್ಲಿ ರೈತರ ಹೈನುಗಾರಿಕೆ ಹೆಚ್ಚಿದೆ. ಮೊದಲು ನೀರಿನ ಕೊರತೆ ಕಾಡುತ್ತಿತು. ಈಗ ನಮ್ಮ ಬಾವಿ ಕೊಳವೆ ಬಾವಿಗೆ ನೀರು ಲಭ್ಯವಾಗಿದೆ. ನೀರಿನ ಸಮಸ್ಯೆ ಕಾಡುತ್ತಿಲ್ಲ.