ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿಯ ಸಿದ್ಧಸಿರಿ ಸೌಹಾರ್ದ ಅಧ್ಯಕ್ಷ ಯತ್ನಾಳ್‌ಗೆ ಶೋಕಾಸ್ ನೋಟಿಸ್ ಜಾರಿ

Published 16 ಫೆಬ್ರುವರಿ 2024, 8:49 IST
Last Updated 16 ಫೆಬ್ರುವರಿ 2024, 8:49 IST
ಅಕ್ಷರ ಗಾತ್ರ

ಚಿಂಚೋಳಿ: ಕಬ್ಬು ಅರೆಯುವ ಪರವಾನಗಿ‌ ಪಡೆಯದೇ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಯೂ ಪಡೆಯದೇ ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದನ್ನು ಆಕ್ಷೇಪಿರುವ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಆಯುಕ್ತರು ಮತ್ತು ನಿರ್ದೇಶಕರು, 24 ಗಂಟೆಯಲ್ಲಿ ಉತ್ತರ ನೀಡುವಂತೆ ಸಿದ್ಧಸಿರಿ ಸೌಹಾರ್ದ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಸಿದ್ಧಸಿರಿ ಸೌಹಾರ್ದ ಸಹಕಾರಿಯ ಸಿದ್ಧಸಿರಿ ಎಥೆನಾಲ್ ಮತ್ತು ವಿದ್ಯುತ್ ಘಟಕದಲ್ಲಿ ಕಬ್ಬು ನುರಿಸಲು ಮುಂದಾಗಿರುವುದು ಸರಿಯಲ್ಲ ಎಂದಿದ್ದಾರೆ. ಅನುಮತಿ ಕೋರಿ ಸಲ್ಲಿಸಿದ ಅರ್ಜಿಗೆ ಅಗತ್ಯ ದಾಖಲಾತಿ ಸಲ್ಲಿಸದೇ ಅಪೂರ್ಣವಾಗಿರುವ ಕುರಿತು ತಮಗೆ ಲಿಖಿತ ಮಾಹಿತಿ‌ ನೀಡಿ, ಸೂಕ್ತ ದಾಖಲೆ ಒದಗಿಸಿ ಕಬ್ಬು ಅರೆಯುವ ಅನುಮತಿ ಪಡೆಯುವಂತೆ ನಿಮಗೆ ಸೂಚಿಸಲಾಗಿತ್ತು. ಆದರೂ ನೀವು ಅನುಮತಿ ಪಡೆಯದೇ ಕಬ್ಬು ನುರಿಸಲು ಪ್ರಾರಂಭಿಸಿದ್ದು ಕಬ್ಬು (ನಿಯಂತ್ರಣ) ಆದೇಶ 1966ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನೋಟಿಸಿನಲ್ಲಿ ತಿಳಿಸಲಾಗಿದೆ. ಕಬ್ಬು ಅರಿಯುವ ಪರವಾನಗಿ ನವೀಕರಿಸಿಕೊಳ್ಳದೇ, ಕಬ್ಬು ರಸ ಮತ್ತು ಸಕ್ಕರೆ ರಸದಿಂದ ಎಥೆನಾಲ್ ಉತ್ಪಾದಿಸಿದ ನಿಮ್ಮ ವಿರುದ್ದ ಏಕೆ ಮೊಕದ್ದಮೆ ದಾಖಲಿಸಬಾರದು ಎಂಬುದಕ್ಕೆ ಸಮಜಾಯಿಷಿ ಅಥವಾ ಉತ್ತರ ನೀಡುವಂತೆ ಜನವರಿ 24ರಂದು ಪತ್ರ ಬರೆಯಲಾಗಿತ್ತು.

ಆದರೂ ಈವರೆಗೂ ಉತ್ತರ ಅಥವಾ ಸಮಜಾಯಿಷಿ ನೀಡದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. 24 ಗಂಟೆಯೊಳಗಾಗಿ ಪ್ರತಿಕ್ರಿಯೆ ನೀಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂದು ಫೆ. 16ರಂದು ನೀಡಿದ ಕಾರಣ ಕೇಳಿ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT