ಸೋಮವಾರ, ಜನವರಿ 25, 2021
19 °C

ಸ್ಲೀಪರ್ ಬಸ್‌ಗಳಿಗೆ ಪ್ರೋತ್ಸಾಹ ದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಪ್ರಯಾಣಿಕರ ಕೋರಿಕೆ ಮೇರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿವಿಧ ಮಾರ್ಗಗಳಲ್ಲಿ ಪ್ರೋತ್ಸಾಹದಾಯಕ ದರದಲ್ಲಿ ನೂತನವಾಗಿ ‘ನಾನ್ ಎ.ಸಿ ಸ್ಲೀಪರ್’ ಬಸ್‍ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮರಾವ್  ತಿಳಿಸಿದ್ದಾರೆ.

ಯಾದಗಿರಿಯಿಂದ ಬೆಂಗಳೂರಿಗೆ ಸಂಜೆ 7 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ ₹ 850 ಇರುತ್ತದೆ. ಶಕ್ತಿನಗರದಿಂದ ಬೆಂಗಳೂರಿಗೆ ರಾತ್ರಿ 8.30 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ ₹ 775 ಇದೆ. ರಾಯಚೂರದಿಂದ ಬೆಂಗಳೂರಿಗೆ ರಾತ್ರಿ 9.30 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ ₹ 750 ಮಾಡಲಾಗಿದೆ.

ಮಂತ್ರಾಲಯದಿಂದ ಬೆಂಗಳೂರಿಗೆ ರಾತ್ರಿ 10.45 ಗಂಟೆಗೆ ಬಸ್ ಹೊರಡಲಿದ್ದು, ಪ್ರೋತ್ಸಾಹದಾಯಕ ದರ ₹ 680 ಹಾಗೂ ಬೆಂಗಳೂರಿನಿಂದ ರಾಯಚೂರಿಗೆ ರಾತ್ರಿ 7.45 ಗಂಟೆಗೆ ಹೊರಡಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.