ಕಲಬುರಗಿ: ಜಿದ್ದಾಜಿದ್ದಿನ ಹೋರಾಟದಲ್ಲಿ ಭಾರತದ ಸ್ನಿಗ್ಧಾ ಕಾಂತಾ ಅವರು ಮಲೇಷ್ಯಾದ ಎಲ್ಸಾ ವ್ಯಾನ್ ಅವರನ್ನು ಮಣಿಸುವ ಮೂಲಕ ಕಲಬುರಗಿ ಓಪನ್ ಮಹಿಳೆಯರ ಐಟಿಎಫ್ ಟೆನಿಸ್ ಟೂರ್ನಿಯ ಅರ್ಹತಾ ಸ್ಪರ್ಧೆಯಲ್ಲಿ ಎರಡನೇ ಸುತ್ತಿಗೆ ಕಾಲಿಟ್ಟರು.

ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಸುತ್ತಿನ ಸಿಂಗಲ್ಸ್ ವಿಭಾಗದ ಹಣಾಹಣಿಯಲ್ಲಿ ಸ್ನಿಗ್ಧಾ 6–1, 5–7, 10–3ರಿಂದ ಎದುರಾಳಿ ವಿರುದ್ಧ ಜಯದ ನಗೆ ಬೀರಿದರು.

ಮೊದಲ ಸೆಟ್ಅನ್ನು ಸುಲಭವಾಗಿ ವಶಮಾಡಿಕೊಂಡ ಸ್ನಿಗ್ಧಾ ಅವರಿಗೆ ಎರಡನೇ ಸೆಟ್ನಲ್ಲಿ ಎಲ್ಸಾ ಅವರಿಂದ ತೀವ್ರ ಪೈಪೋಟಿ ಎದುರಾಯಿತು. ಆದರೆ ಟೈಬ್ರೇಕರ್ಗೆ ಸಾಗಿದ ಪಂದ್ಯದ ಮೂರನೇ ಸೆಟ್ನ ಕೊನೆಯ ಹಂತದಲ್ಲಿ ಒತ್ತಡವನ್ನು ಮೆಟ್ಟಿನಿಂದ ಭಾರತದ ಆಟಗಾರ್ತಿ ಗೆಲುವು ಒಲಿಸಿಕೊಂಡರು.

ಮೊದಲ ಸುತ್ತಿನಲ್ಲಿ ಭಾರತದ 12 ಆಟಗಾರ್ತಿಯರು ಜಯ ಸಾಧಿಸಿ ಮುಂದಿನ ಸುತ್ತಿಗೆ ಮುನ್ನಡೆದರು.

ಮೊದಲ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಎ. ಲಕ್ಷ್ಮಿ ಪ್ರಭಾ 6–3, 6–1ರಿಂದ ವಂಶಿತಾ ಪಠಾಣಿಯಾ ಎದುರು, ಆಹಾನ್ ಆಹಾನ್ 5–7, 6–4, 11–9ರಿಂದ ಡ್ಯಾನಿಕಾ ಫರ್ನಾಂಡೊ ಮೇಲೆ, ಸೌಮ್ಯಾ ರೊಂಡೆ 7–5, 6–4ರಿಂದ ದಿಶಾ ಬೆಹ್ರಾ ವಿರುದ್ಧ, ಕಶಿಶ್ ಭಾಟಿಯಾ 6–4, 6–0ರಿಂದ ಪೂಜಾ ಇಂಗಳೆ ಎದುರು ಜಯಭೇರಿ ಮೊಳಗಿಸಿದರು.

ಮಹಿಕಾ ಖನ್ನಾ 6–1, 6–3ರಿಂದ ಹೃದಯೇಶಿ ಪೈ ಎದುರು, ಐಶ್ವರ್ಯಾ ಜಾಧವ್ 6–3, 6–1ರಿಂದ ಪ್ರತ್ಯೂಷಾ ರಾಚುಪುಡಿ ವಿರುದ್ಧ, ಶ್ರೀಮಾನ್ಯ ರೆಡ್ಡಿ ಅನುಗೊಂಡ 3–6, 6–4, 10–6ರಿಂದ ಸಂಜನಾ ಸಿರಿಮಲ್ಲ ಮೇಲೆ, ಸಂದೀಪ್ತಿ ಸಿಂಗ್ ರಾವ್ 7–5, 6–2ರಿಂದ ಸೈಲಿ ಪ್ರಶಾಂತಕುಮಾರ ಟಕ್ಕರ್ ಎದುರು, ಯಶಸ್ವಿನಿ ಪನ್ವಾರ್ 6–4, 6–4ರಿಂದ ಆಕೃಥಿ ಸೊಂಕುಸಾರೆ ವಿರುದ್ಧ, ಬೇಳಾ ಥಮಾಂಕರ್ 6–3, 6–2ರಿಂದ ಜಿಜ್ಞಾಸಾ ನರಸಿಂಘಾನಿ ಎದುರು, ಲಕ್ಷ್ಮಿಶ್ರೀ ದಂಡು 6–1, 6–1ರಿಂದ ಜೀತೇಶ್ ಕುಮಾರಿ ವಿರುದ್ಧ ಗೆದ್ದು ಎರಡನೇ ಸುತ್ತು ತಲುಪಿದರು.

ಮಾರ್ಚ್ 2ರಂದು ಅರ್ಹತಾ ಸ್ಪರ್ಧೆಯ ಎರಡನೇ ಸುತ್ತಿನ ಪಂದ್ಯಗಳು ನಡೆಯಲಿವೆ. ಮಾರ್ಚ್ 3ರಿಂದ ಆರಂಭವಾಗಲಿರುವ ಮುಖ್ಯಸುತ್ತಿನ ಪಂದ್ಯಗಳ ಡ್ರಾ ಸಮಾರಂಭವು ಸೋಮವಾರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.