ಕಲಬುರಗಿ: ಎಸ್‌ಎಸ್‌ಎಲ್‌ಸಿ ಎರಡನೇ ಪೂರಕ ಪರೀಕ್ಷೆಯ ತೃತೀಯ ಭಾಷಾ(ಹಿಂದಿ ಸೇರಿದಂತೆ ವಿವಿಧ ಭಾಷೆ) ಪರೀಕ್ಷೆಯು ಜಿಲ್ಲೆಯ 34 ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ಸುಸೂತ್ರವಾಗಿ ಜರುಗಿತು.
ತೃತೀಯ ಭಾಷಾ ಪರೀಕ್ಷೆಗೆ ಜಿಲ್ಲೆಯ ಎಂಟು ಶೈಕ್ಷಣಿಕ ವಲಯಗಳಿಂದ 290 ಹಳೇ ವಿದ್ಯಾರ್ಥಿಗಳು ಹಾಗೂ 7,010 ರೆಗ್ಯುಲರ್ ವಿದ್ಯಾರ್ಥಿಗಳು ಸೇರಿದಂತೆ 7,300 ಮಂದಿ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 79 ಹಳೇ ವಿದ್ಯಾರ್ಥಿಗಳು, 1,694 ರೆಗ್ಯುಲರ್ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1,773 ಮಂದಿ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. 211 ಹಳೇ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 5,527 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಅಫಜಲಪುರದಲ್ಲಿ 173, ಆಳಂದದಲ್ಲಿ 268, ಚಿಂಚೋಳಿಯಲ್ಲಿ 247, ಚಿತ್ತಾಪುರದಲ್ಲಿ 206, ಕಲಬುರಗಿ ಉತ್ತರದಲ್ಲಿ 237, ಕಲಬುರಗಿ ದಕ್ಷಿಣದಲ್ಲಿ 274, ಜೇವರ್ಗಿಯಲ್ಲಿ 205, ಸೇಡಂನಲ್ಲಿ 163 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಡಿಡಿಪಿಐ ಕಚೇರಿ ಮೂಲಗಳು ತಿಳಿಸಿವೆ.
ಆಗಸ್ಟ್ 5ರಂದು ಸೋಮವಾರ ವಿಜ್ಞಾನ ಹಾಗೂ ರಾಜ್ಯಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.