ಭಾನುವಾರ, ಜೂನ್ 20, 2021
26 °C

ಎಸ್ಸೆಸ್ಸೆಲ್ಸಿ ಫಲಿತಾಂಶ | ಕಲಬುರ್ಗಿ ಜಿಲ್ಲೆಗೆ 22ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ 22ನೇ ಸ್ಥಾನ ಪಡೆದಿದ್ದು ‘ಬಿ’ ಗ್ರೇಡ್‌ ಬಂದಿದೆ. ಕಳೆದ ಬಾರಿ 30ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ತುಸು ಸುಧಾರಣೆ ಕಂಡಿದೆ.

ಅಫಜಲಪುರ ತಾಲ್ಲೂಕಿನ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಪಾಸ್‌ ಆಗುವ ಮೂಲಕ ‘ಎ’ ಗ್ರೇಡ್‌ ಲಭಿಸಿದೆ. ಆಳಂದ, ಚಿಂಚೋಳಿ, ಕಲಬುರ್ಗಿ ಉತ್ತರ, ಕಲಬುರ್ಗಿ ದಕ್ಷಿಣ, ಜೇವರ್ಗಿ ತಾಲ್ಲೂಕುಗಳು ‘ಬಿ’ ಗ್ರೇಡ್‌ ಮತ್ತು ಚಿತ್ತಾಪುರ ಹಾಗೂ ಸೇಡಂ ‘ಸಿ’ ಗ್ರೇಡ್‌ ಪಡೆದಿವೆ.

ಶೇ 75ಕ್ಕೂ ಹೆಚ್ಚು ಫಲಿತಾಂಶಕ್ಕೆ ‘ಎ’ ಗ್ರೇಡ್‌, ಶೇ 60ರಿಂದ ಶೇ 75ರೊಳಗಿನ ಫಲಿತಾಂಶಗಳನ್ನು ಬಿ ಹಾಗೂ ಶೇ 60ಕ್ಕೂ ಕಡಿಮೆ ಇದ್ದ ಫಲಿತಾಂಶವನ್ನು ‘ಸಿ’ ಎಂದು ಪರಿಗಣಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು