ಸೋಮವಾರ, ಏಪ್ರಿಲ್ 12, 2021
24 °C

ಆಯ್ದ ರೂಟ್‌ಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಕಲಬುರ್ಗಿ: ವೇತನ ಪರಿಷ್ಕರಣೆಗೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ‌ನಡೆಸುತ್ತಿರುವ ಮುಷ್ಕರದ ‌ಎರಡನೇ ದಿನವಾದ ಗುರುವಾರ ಇಲ್ಲಿನ ‌ಕೇಂದ್ರ ಬಸ್ ನಿಲ್ದಾಣದಿಂದ ಐದು ಸಾರಿಗೆ ಸಂಸ್ಥೆ ಬಸ್‌ಗಳು ವಿವಿಧೆಡೆ ಸಂಚಾರ ನಡೆಸಿವೆ.

ಆದರೆ, ದೂರದ ಊರಿನ ಪ್ರಯಾಣ ಸಾಧ್ಯವಾಗಿಲ್ಲ. ಕೆಲ‌ ಸಿಬ್ಬಂದಿಯ ‌ಮನವೊಲಿಸಿದ ಅಧಿಕಾರಿಗಳು ಕಲಬುರ್ಗಿಯಿಂದ ಜೇವರ್ಗಿ, ಶಹಾಪುರಗಳಿಗೆ ಬಸ್ ಓಡಿಸಲು ಸಫಲರಾದರು.

ಕೇಂದ್ರ ಬಸ್ ನಿಲ್ದಾಣದಿಂದ ಖಾಸಗಿ ಬಸ್ ಸಂಚಾರ ಮುಂದುವರಿದಿದೆ. ಆದರೆ, ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ‌.

ಬಸ್ ನಿಲ್ದಾಣ, ನಗರದಲ್ಲಿರುವ ಮೂರು ಬಸ್ ಡಿಪೊಗಳ ಎದುರು ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.

ನಗರ ಸಾರಿಗೆ ‌ಸಂಚಾರ ಸಂಪೂರ್ಣ ಸ್ತಬ್ದವಾಗಿದೆ. ಉದ್ಯೋಗಿಗಳು ಸ್ವಂತ ವಾಹನ, ಅಟೊಗಳನ್ನು ನೆಚ್ಚಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು