ಕಲಬುರಗಿ: 8ನೇ ಆವೃತ್ತಿಯ ಕೆಬಿಎನ್ ಪ್ರೀಮಿಯರ್ ಲೀಗ್ ಟಿ–20 ಕ್ರಿಕೆಟ್ ಟೂರ್ನಿಗೆ ಸೋಮವಾರ ಚಾಲನೆ ದೊರೆತಿದ್ದು, ಉದ್ಘಾಟನಾ ಪಂದ್ಯದಲ್ಲಿ ಸ್ಟೇಷನ್ ಈಗಲ್ಸ್ ತಂಡವು ಗೆಲುವಿನ ನಗೆ ಬೀರಿತು.

ನಗರದ ಸಂತ್ರಾಸವಾಡಿಯ ಕೆಬಿಎನ್ ಟರ್ಫ್ ಮೈದಾನದಲ್ಲಿ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸ್ಟೇಷನ್ ಈಗಲ್ಸ್ ತಂಡವು 23 ರನ್ಗಳಿಂದ ಮಾರ್ಕೆಟ್ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿತು. ಈ ಮೂಲಕ ಇದೇ ಟೂರ್ನಿಯ 7ನೇ ಆವೃತ್ತಿಯಲ್ಲಿ ಫೈನಲ್ನಲ್ಲಿ ಅನುಭವಿಸಿದ್ದ ಸೋಲಿನ ಸೇಡು ತೀರಿಸಿಕೊಂಡಿತು.

ಈಗಲ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ತಂಡದ ನಾಯಕ ಮೋಹಿತ ಬಿ.ಎ. ಏಳು ಬೌಂಡರಿ, ಒಂದು ಸಿಕ್ಸರ್ ಒಳಗೊಂಡ 69 ರನ್ಗಳ ಬಲದಿಂದ ಎದುರಾಳಿ ತಂಡದ ಮೊತ್ತ ಹೆಚ್ಚಿಸಿದರು.

ಈ ಗುರಿ ಬೆನ್ನಟ್ಟಿದ ಮಾರ್ಕೆಟ್ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕೇವಲ 150 ರನ್ ಗಳಿಸಿತು. ಈಗಲ್ಸ್ ತಂಡದ ಪರ ಮೋಹನ್ ಸುತಾರ 20ಕ್ಕೆ 3 ಹಾಗೂ ಪುನೀತ್ಕುಮಾರ 28ಕ್ಕೆ 3 ವಿಕೆಟ್ ಸಾಧನೆ ತೋರಿದರು.

ಸಂಕ್ಷಿಪ್ತ ಸ್ಕೋರ್: ಸ್ಟೇಷನ್ ಈಗಲ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 173 ರನ್ (ಮೋಹಿತ್ ಬಿ.ಎ. 69 ರನ್, ಅಮಯ್ 38 ರನ್, ಶರಣಬಸವ 19 ರನ್; ಕ್ಲೆಮೆಂಟ್ ರಾಜಮೋಹನ್ 23ಕ್ಕೆ 2); ಮಾರ್ಕೆಟ್ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 150 ರನ್ (ಅನುರಾಗ 34ರನ್, ಮಾಧವ ಬಜಾಜ್ 33 ರನ್, ಸೌರಭ್ ಮಟ್ಟೂರ 27 ರನ್; ಮೋಹನ್ ಸುತಾರ 20ಕ್ಕೆ3, ಪುನೀತಕುಮಾರ 28ಕ್ಕೆ 3 ವಿಕೆಟ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.