ಅಫಜಲಪುರ: ತಾಲ್ಲೂಕಿನ ಕೆಕ್ಕರಸಾವಳಗಿಯ ಚೆನ್ನಮಲ್ಲೇಶ್ವರ ಖಾಸಗಿ ಅಗ್ರೊ ಕೇಂದ್ರದಿಂದ ದುಬಾರಿ ಬೆಲೆಗೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್ ಗಡಗಿಮನಿ ಅವರ ನೇತೃತ್ವದಲ್ಲಿ ಕಲಬುರಗಿ ಜಾಗೃತ ದಳ ಗುರುವಾರ ದಾಳಿ ನಡೆಸಿ ₹6.22 ಲಕ್ಷ ಮೌಲ್ಯದ ರಸಗೊಬ್ಬರ ಮಾರಾಟಕ್ಕೆ ನಿರ್ಬಂಧ ವಿಧಿಸಿ, ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಿದೆ.

‘ತಾಲ್ಲೂಕಿನಲ್ಲಿ ಈಗಾಗಲೇ ತಾಲ್ಲೂಕಿನ 20ಕ್ಕೂ ಹೆಚ್ಚು ಖಾಸಗಿ ರಸಗೊಬ್ಬರ ಕೇಂದ್ರಗಳ ಮೇಲೆ ದಾಳಿ ಮಾಡಲಾಗಿದೆ. ಅಗ್ರೋ ಕೇಂದ್ರದವರು ಕಡ್ಡಾಯವಾಗಿ ತಮ್ಮ ಅಂಗಡಿಗಳ ಮುಂದೆ ರಸಗೊಬ್ಬರದ ಸಂಗ್ರಹ ಮಾಹಿತಿ ಮತ್ತು ದರ ಪಟ್ಟಿ ಹಾಕಬೇಕು. ರಸಗೊಬ್ಬರ ಖರೀದಿ ಮಾಡುವವರಿಗೆ ಕಡ್ಡಾಯವಾಗಿ ರಶೀದಿ ನೀಡಬೇಕು’ ಎಂದು ತಿಳಿಸಿದರು.

ದಾಳಿಯಲ್ಲಿ ಜಾಗೃತಿ ದಳದ ಸಹಾಯಕ ಕೃಷಿ ನಿರ್ದೇಶಕ ಸತೀಶ್ ಮುದ್ದ, ಕವಿತಾ ಯರಗಲ್ಲ, ಅಫಜಲಪುರ ಕೃಷಿ ಅಧಿಕಾರಿ ದಿವ್ಯ ಕರಜಗಿ ಸೇರಿದಂತೆ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.