ಸೋಮವಾರ, ನವೆಂಬರ್ 23, 2020
22 °C

ಸೇಡಂ: ಗೂಡಂಗಡಿಗಳ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೇಡಂ: ಪಟ್ಟಣದ ಮುಖ್ಯರಸ್ತೆಯ ಬದಿಯಲ್ಲಿ ಹಾಗೂ ಪುರಸಭೆ ಕಚೇರಿ ಎದುರಿದ್ದ 50ಕ್ಕೂ ಹೆಚ್ಚು ಗೂಡಂಗಡಿಗಳನ್ನು ಅಧಿಕಾರಿಗಳು ಬುಧವಾರ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.

ಮುಖ್ಯ ರಸ್ತೆ ಬದಿ ಕಂಪ್ಯೂಟರ್‌ ಸೆಂಟರ್‌, ಝರಾಕ್ಸ್ ಕೇಂದ್ರ, ಡಿಟಿಪಿ ಕೆಂದ್ರಗಳನ್ನು ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು.

ಬುಧವಾರ ಬೆಳಿಗ್ಗೆ ಜೆಸಿಬಿ ಮತ್ತು ಪೊಲೀಸ್ ಬಂದೋಬಸ್ತ್‌ ಮೂಲಕ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.ಅಂಗಡಿಗಳು ಇರುವ ಸ್ಥಳದಲ್ಲಿ ಪುರಸಭೆ ವತಿಯಿಂದ ವ್ಯಾಪಾರ ಮಳಿಗೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಸುಮಾರು 31ಕ್ಕೂ ಅಧಿಕ ಮಳಿಗೆಗಳು ನಿರ್ಮಾಣವಾಗಲಿವೆ. ಆದ್ದರಿಂದ ಸ್ಥಳ ತೆರುವುಗೊಳಿಸುವುದು ಅನಿವಾರ್ಯವಾಗಿತ್ತು. ಆದ್ದರಿಂದ ತೆರುವುಗೊಳಿಸಲಾಗಿದೆ’ ಎನ್ನುವುದು ಪುರಸಭೆ ಅಧಿಕಾರಿಗಳ ಮಾತು. ಗೂಡಂಗಡಿ ಇರುವ ಸ್ಥಳದಲ್ಲಿ ಒಂದು ಕುಟುಂಬ ಬುಟ್ಟಿ ನೇಯ್ಗೆ ಕಾಯಕ ಮಾಡುತ್ತಲೇ ಜೀವನ ಸಾಗಿಸುತ್ತಿತ್ತು. ಈ ಕುಟುಂಬಕ್ಕೆ ಅಧಿಕಾರಿಗಳು ಬೇರೆ ಕಡೆ ಆಶ್ರಯ ನೀಡುವುದಾಗಿ ಭರವಸೆ ನೀಡಿ ಪುರಸಭೆ ವಾಹನದಲ್ಲಿಯೇ ಮನೆಯ ಸಾಮಗ್ರಿಗಳನ್ನು ಸಾಗಿಸಿ ಮಾನವೀಯತೆ ಮೆರೆದರು.

ಉಪ ವಿಭಾಗಾಧಿಕಾರಿ ರಮೇಶ ಕೋಲಾರ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್ ಮತ್ತು ಪುರಸಭೆ ಮುಖ್ಯಾಧಿಕಾರಿ ಸತೀಶಗುಡ್ಡೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.