ಕಲಬುರ್ಗಿ: 2020-21ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಾಮಾಜಿಕ ಅರಿವು ಸಾಂಸ್ಕೃತಿಕ ಕಾರ್ಯಕ್ರಮದಡಿ ಅಸ್ಪೃಶ್ಯತೆಯ ಬಗ್ಗೆ ಅರಿವು ಮೂಡಿಸಲು ಬೀದಿ ನಾಟಕ ಆಯೋಜಿಸಲಾಗುತ್ತಿದೆ.

ಇದಕ್ಕಾಗಿ ಅರ್ಹ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಂದ ಬೀದಿ ನಾಟಕದ ಹಸ್ತಪ್ರತಿಗಳನ್ನು ಅಹ್ವಾನಿಸಲಾಗಿದೆ ಎಂದು ಕಲಬುರ್ಗಿ ರಂಗಾಯಣ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಅಧಿನಿಯಮದ ಬಗ್ಗೆ ಬೀದಿನಾಟಕ ರಚಿಸಬೇಕು. ಆಯ್ಕೆಯಾದ ಒಂದು ನಾಟಕಕ್ಕೆ ಸೂಕ್ತ ಸಂಭಾವನೆ ನೀಡಲಾಗುತ್ತದೆ. ನಾಟಕದ ಆಯ್ಕೆಯ ಅಂತಿಮ ತೀರ್ಮಾನವು ರಂಗಾಯಣದ್ದಾಗಿದೆ.

ನಾಟಕದ ಹಸ್ತಪ್ರತಿಗಳನ್ನು ‘ಆಡಳಿತಾಧಿಕಾರಿ, ರಂಗಾಯಣ ಡಾ.ಸಿದ್ದಯ್ಯ ಪುರಾಣಿಕ ಸಾಂಸ್ಕೃತಿಕ ಸಮುಚ್ಛಯ, ಸೇಡಂ– ಶಹಾಬಾದ್ ವರ್ತುಲ ರಸ್ತೆ, ಕಲಬುರ್ಗಿ-585105’ ಈ ವಿಳಾಸಕ್ಕೆ ಅಥವಾ ರಂಗಾಯಣದ ಇ-ಮೇಲ್ rangayanakalaburagi@gmail.com ವಿಳಾಸಕ್ಕೆ ಜೂನ್ 20ರೊಳಗಾಗಿ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ 08472-227735ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.