ಕಲಬುರಗಿ: ‘ಪ್ರತ್ಯೇಕ ಪ್ರಕರಣಗಳಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ನಾಲ್ವರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುವ ಮೂಲಕ ಗುಣಮುಖರನ್ನಾಗಿ ಮಾಡಲಾಗಿದೆ’ ಎಂದು ಜೀವಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಅಜಯ್ ಗುತ್ತೇದಾರ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಸ್ತೆ ಅಪಘಾತದಲ್ಲಿ ಅರುಣ ಎನ್ನುವವರ ತಲೆಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ಬಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಜ್ಞ ವೈದ್ಯರು ಐದು ಗಂಟೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದರು. ಬೆನ್ನಿನ ಮೂಳೆ ಮುರಿದಿದ್ದರಿಂದ ರೋಗಿಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಾಲ್ಕು ಶಸ್ತ್ರಚಿಕಿತ್ಸೆ ಮಾಡಲಾಯಿತು. ಈಗ ಅವರು ಗುಣಮುಖರಾಗಿದ್ದಾರೆ’ ಎಂದರು.

‘ಇನ್ನೊಂದು ಪ್ರಕರಣದಲ್ಲಿ ಮಹೇಶ ಎನ್ನುವವರಿಗೆ ಗಂಭೀರವಾದ ಪೆಟ್ಟು ಬಿದ್ದ ಕಾರಣ ಕಾಲು ದೇಹದಿಂದ ಬೇರ್ಪಟ್ಟಿತ್ತು. ಚಿಕಿತ್ಸೆ ನೀಡಿ 14 ದಿನಗಳಲ್ಲಿಯೇ ಗುಣಮುಖರನ್ನಾಗಿ ಮಾಡಲಾಯಿತು. ಸಿದ್ದಾರ್ಥ ಎನ್ನುವ ಮೂರು ವರ್ಷದ ಮಗು ಎರಡನೇ ಮಹಡಿಯಿಂದ ಕೆಳಗಡೆ ಬಿದ್ದು ಗಾಯಗೊಂಡಿತ್ತು. ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪ್ರಜ್ಞೆಯ ಮಟ್ಟ (ಜಿಸಿಎಸ್) ಕಡಿಮೆ ಇತ್ತು. ರಕ್ತ ಹೆಪ್ಪುಗಟ್ಟಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ನೀಡದೆ ಗುಣಮುಖರನ್ನಾಗಿ ಮಾಡಿದ್ದಾರೆ’ ಎಂದು ಹೇಳಿದರು.

‘ಯುವರಾಜ ಎನ್ನುವ ಐದು ವರ್ಷದ ಹುಡುಗನಿಗೆ ರಸ್ತೆ ಅಪಘಾತದಲ್ಲಿ ಮುಖ ಹಾಗೂ ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದವು. ವೈದ್ಯರ ತಂಡ 2 ತಾಸುಗಳವರೆಗೆ ಮುಖದ ಆಪರೇಷನ್ ಮಾಡಿದ್ದಾರೆ. ಆ ಹುಡುಗ ಚೇತರಿಸಿಕೊಂಡಿದ್ದಾನೆ. ಮಹಡಿಯ ಮೇಲಿಂದ ಬಿದ್ದ ಪರಿಣಾಮ ಸಮೃದ್ಧಿ ಎನ್ನುವ 6 ವರ್ಷದ ಬಾಲಕಿಯ ಮೆದುಳಿಗೆ ಪೆಟ್ಟು ಬಿದ್ದು ರಕ್ತ ಹೆಪ್ಪುಗಟ್ಟಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡಿದ್ದಾರೆ’ ಎಂದು ತಿಳಿಸಿದರು.

‘ಆಸ್ಪತ್ರೆ ಆರಂಭವಾದಾಗಿನಿಂದ ಇಲ್ಲಿಯವರೆಗೂ 150ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ವೈದ್ಯರು ತಂಡವಾಗಿ ಕೆಲಸ ಮಾಡುತ್ತಿರುವ ಕಾರಣ ಇದು ಸಾಧ್ಯವಾಗಿದೆ’ ಎಂದರು.

ವೈದ್ಯರಾದ ಡಾ.ಸುಶೀಲ್ ಗುತ್ತೇದಾರ, ಡಾ.ಶಿಫಾಲಿ, ಡಾ.ದಿವ್ಯಾ, ಡಾ.ಶಶಾಂಕ್ ಸಂಗೋಳ್ಳಿ, ಡಾ.ವಿಶಾಲ್ ಹುಗ್ಗಿ, ಡಾ.ಆನಂದ ಪಾಟೀಲ, ಡಾ.ಆನಂದ ಮಂಗಲಗಿ, ಡಾ.ವೀರೇಶ, ಡಾ.ಮಲ್ಲಿಕಾರ್ಜುನ, ಡಾ.ವಿಜಯ್ ಕೋಲಾರ ಮತ್ತು ಡಾ.ಶಿವಶರಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.