ಮಂಗಳವಾರ, 3 ಮಾರ್ಚ್ 2026
×
ADVERTISEMENT

ವೈಜ್ಞಾನಿಕ ಪದ್ಧತಿ ಅಧಿಕ ಇಳುವರಿ ಮಂತ್ರ: ಕೃಷಿ ವಿಜ್ಞಾನಿ ವಿಠ್ಠಲ ಐ.ಬೆಣಗಿ

Published : 3 ಮಾರ್ಚ್ 2026, 4:56 IST
Last Updated : 3 ಮಾರ್ಚ್ 2026, 4:56 IST
ADVERTISEMENT
ಫಾಲೋ ಮಾಡಿ
Comments
ನಾವೆಲ್ಲ ಕಬ್ಬನ್ನು ವೈಜ್ಞಾನಿಕವಾಗಿ ಬೆಳೆಯುತ್ತಿಲ್ಲ. ಪ್ರತಿ‌ ಎಕರೆಗೆ 30ರಿಂದ‌ 40 ಟನ್‌ಗಳಷ್ಟು ಬೆಳೆದು ಅಷ್ಟಕ್ಕೇ ತೃಪ್ತರಾಗುತ್ತಿದ್ದೇವೆ. ವೈಜ್ಞಾನಿಕವಾಗಿ ಬೆಳೆದು ಹೆಚ್ಚಿನ ಆದಾಯ ಗಳಿಸಬೇಕು
ಪ್ರಕಾಶ ಎಚ್.ಕುಲಕರ್ಣಿ, ಪ್ರಫುಲ್ಲತಾ ಫೌಂಡೇಷನ್ ಸಂಸ್ಥಾಪಕ
‘ಸತ್ವ ಕಳೆದುಕೊಳ್ಳುತ್ತಿದೆ ಮಣ್ಣು’
‘ಇತ್ತೀಚೆಗೆ ವರ್ಷದಿಂದ ವರ್ಷಕ್ಕೆ ಮಣ್ಣಿನ ಸತ್ವ ಕಡಿಮೆಯಾಗುತ್ತಲೇ ಇದೆ. ಭಾರತ ಸರ್ಕಾರವೇ ಸಂಸತ್ತಿನಲ್ಲಿ ಹೇಳಿರುವಂತೆ 1980ರಲ್ಲಿ 1 ಕೆ.ಜಿ ರಾಸಾಯನಿಕ ಪೋಷಾಕಾಂಶ ಭೂಮಿಗೆ ಹಾಕಿದರೆ 14 ಕೆ.ಜಿಗಳಷ್ಟು ಆಹಾರ ಧಾನ್ಯ ಉತ್ಪಾದನೆಯಾಗುತ್ತಿತ್ತು. ಇದೀಗ 1 ಕೆ.ಜಿ ಪೋಷಕಾಂಶ ಹಾಕಿದರೆ ಬರೀ ನಾಲ್ಕು ಕೆ.ಜಿಗಳಷ್ಟುಆಹಾರ ಧಾನ್ಯ ಸಿಗುತ್ತಿದೆ. 40 ವರ್ಷಗಳಲ್ಲಿ ಮಣ್ಣಿನ ಶಕ್ತಿ ಕಳೆದುಕೊಂಡಿದೆ’ ಎಂದು ವಿಶ್ರಾಂತ ಕುಲಪತಿ ವಿಠ್ಠಲ ಐ. ಬೆಣಗಿ ಕಳವಳ ವ್ಯಕ್ತಪಡಿಸಿದರು. ‘ಕಬ್ಬಿನ ಹೆಚ್ಚಿನ ಇಳುವರಿ ಪಡೆಯಲು ಮಣ್ಣಿನ ಸತ್ವ ಹೆಚ್ಚಿಸುವುದೂ ಮುಖ್ಯ. ಕಬ್ಬು ಚೆನ್ನಾಗಿ ಬೆಳೆಯಲು ಮಣ್ಣಿನಲ್ಲಿರುವ ಸಾವಯವ ಇಂಗಾಲ ಕನಿಷ್ಠ ಶೇ 0.75 ರಷ್ಟಿರಬೇಕು. ಇಡೀ ರಾಜ್ಯದಲ್ಲಿ ಮಣ್ಣಿನಲ್ಲಿರುವ ಸಾವಯವ ಇಂಗಾಲವು ಶೇ 0.25 ರಿಂದ ಶೇ 0.30ರಷ್ಟಿದೆ. ಮಣ್ಣಿನಲ್ಲಿ ಜೀವಾಣುಗಳೇ ಇಲ್ಲದಿದ್ದರೆ ಯಾವುದೇ ಬೆಳೆಯೂ ಚೆನ್ನಾಗಿ ಬೆಳೆಯಲು ಸಾಧ್ಯವೇ ಇಲ್ಲ’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT