ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ತಜ್ಞವೈದ್ಯ ಡಾ.ರಾಹುಲ್ ಚಂದ್ರಪ್ರಕಾಶ ರಗಟೆ (30) ಆಸ್ಟ್ರೇಲಿಯಾದ ಸಿಡ್ನಿಯಿಂದ ಸುಮಾರು 845 ಕಿ.ಮೀ ದೂರದಲ್ಲಿರುವ ಗೋಲ್ಡ್ಕೋಸ್ಟ್ ನಗರದ ಚೆವ್ರಾನ್ ಸೇತುವೆ (ಬೀಚ್) ಬಳಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಬೀದರ್ ಜಿಲ್ಲೆಯ ನಿವೃತ್ತ ಜಿಲ್ಲಾ ಸರ್ಜನ್ ಡಾ.ಚಂದ್ರಪ್ರಕಾಶ ರಗಟೆ ಅವರ ಪುತ್ರ ರಾಹುಲ್ ರಗಟೆ ಗುರುವಾರ ಬೆಳಿಗ್ಗೆ 7.10ಕ್ಕೆ ಅಸುನೀಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

‘ನೀರಿನಲ್ಲಿ ಈಜುತ್ತಿರುವುದನ್ನು ಜನ ನೋಡಿದ್ದಾರೆ. ಆದರೆ, ಅವರು ನೀರಿನಲ್ಲಿ ಮುಳುಗಿದ ಬಳಿಕ ಮತ್ತೆ ಮೇಲೆ ಬಂದಿಲ್ಲ. ಕ್ವಿನ್ಸ್ಲ್ಯಾಂಡ್ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ’ ಎಂದು ಸ್ಕೈ ನ್ಯೂಸ್.ಕಾಮ್ ವರದಿ ಮಾಡಿದೆ. ಹೆಲಿಕಾಪ್ಟರ್, ಜೆಟ್ ಸ್ಕೇಯಿಂಗ್ ಮತ್ತು ಪೊಲೀಸ್ ದೋಣಿ ಮೂಲಕ ಕಾರ್ಯಾಚರಣೆ ನಡೆಸಿರುವುದನ್ನು ಅದು ಉಲ್ಲೇಖಿಸಿತ್ತು. ಶೋಧ ಕಾರ್ಯಾಚರಣೆ ಬಳಿಕ ಶವ ಪತ್ತೆಯಾಗಿದೆ.

‘ಆಸ್ಟ್ರೇಲಿಯಾಕ್ಕೆ ಹೋಗುವ ಮೊದಲು ಯುನೈಟೆಡ್ ಕಿಂಗ್ಡಂ ರ್ಮಿಂಗ್ ಹ್ಯಾಂನ ವಿಶ್ವವಿದ್ಯಾಲಯ ಆಸ್ಪತ್ರೆಯ ರೆಜಿಸ್ಟ್ರಾರ್ ಆಗಿದ್ದರು. ಆದರೆ, ಇಲ್ಲಿಂದ ಅವರು ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಸಿಡ್ನಿಯಲ್ಲಿ ಕೆಲವು ದಿನ ಇದ್ದು ಜೂನ್ 1ರಂದು ಗೋಲ್ಡೊಕೋಸ್ಟ್ ನಗರದಲ್ಲಿ ಸೇವೆಗೆ ಹಾಜರಾಗಿದ್ದರು. ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಡಾ.ರಾಹುಲ್ ಅವರ ಸಾವು ಸಂಭವಿಸಿರುವ ಬಗ್ಗೆ ಅನುಮಾನಗಳಿದ್ದು, ಪೊಲೀಸರ ತನಿಖೆಯ ನಂತರವೇ ಸತ್ಯ ತಿಳಿಯಲಿದೆ’ ಎಂದು ಡಾ.ರಾಹುಲ್ ಅವರ ಆಪ್ತ ಶಿವಕುಮಾರ ಚೆಟ್ಟಿ ತಿಳಿಸಿದ್ದಾರೆ.

ವಿಜಯಾಶ್ರೀ– ಡಾ.ಚಂದ್ರಪ್ರಕಾಶ ರಗಟೆ ದಂಪತಿಗೆ ಇಬ್ಬರು ಪುತ್ರರು, ಪುತ್ರಿ ಇದ್ದು ಎಲ್ಲರೂ ತಜ್ಞ ವೈದ್ಯರಾಗಿದ್ದಾರೆ. ಮೃತಪಟ್ಟ ರಾಹುಲ್ ಅವರ ಅಣ್ಣ ಡಾ.ಸಾಗರ ಚಂದ್ರಪ್ರಕಾಶ ರಗಟೆ ಕೋಲ್ಕತ್ತಾದಲ್ಲಿ ಕಿಡ್ನಿ ತಜ್ಞರಾಗಿದ್ದಾರೆ. ಪುತ್ರಿ ಡಾ.ದಿವ್ಯಾ ಮುಂಬೈನಲ್ಲಿ ತಜ್ಞವೈದ್ಯರಾಗಿದ್ದಾರೆ.

ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಜತೆ ಮಾತನಾಡಿ, ‘ಡಾ.ರಾಹುಲ್ ಅವರ ಮೃತದೇಹ ಭಾರತಕ್ಕೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.