ಗುರುವಾರ , ಜನವರಿ 30, 2020
20 °C
ಹುಣಸಗಿ ತಾಲ್ಲೂಕಿನ ವಜ್ಜಲದಲ್ಲಿ ಜೀರ್ಣೋದ್ಧಾರಗೊಂಡ ದೇವಸ್ಥಾನ ಉದ್ಘಾಟನೆ

ನೆಮ್ಮದಿ ಜೀವನಕ್ಕೆ ದೇವರನ್ನು ಪ್ರಾರ್ಥಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸಗಿ: ನಿತ್ಯದ ಜೀವನದಲ್ಲಿ ಉಲ್ಲಾಸದಿಂದ ಇರಲು ಮತ್ತು ಶಾಂತಿ ನೆಮ್ಮದಿಗಾಗಿ ಪ್ರತಿಯೊಬ್ಬರು ದಿನದ ಒಂದು ಗಂಟೆಯಾದರೂ ದೇವರ ಧ್ಯಾನ ಮಾಡಿ ಎಂದು ಶರಣ ಸಣ್ಣಕೆಪ್ಪ ಮುತ್ಯಾ ಬಂಡೆಪ್ಪನಹಳ್ಳಿ ಹೇಳಿದರು.

ತಾಲ್ಲೂಕಿನ ವಜ್ಜಲ ಗ್ರಾಮದ ಎಸ್.ಸಿ ವಾರ್ಡ್ ನಲ್ಲಿ ಜೀರ್ಣೋದ್ದಾರ ಮಾಡಿರುವ ಹಿರೇ ಒಡೆಯ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು. ಹಣ, ಆಸ್ತಿ ಅಂತಸ್ತು ಐಶ್ವರ್ಯ ಯಾವುದು ನೆಮ್ಮದಿಯನ್ನು ತಂದು ಕೊಡಲಾರದು. ಆದರೆ ಗಳಿಸಿದ ಹಣದಲ್ಲಿ ಸ್ವಲ್ಪವಾದರೂ ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ವಿನಿಯೋಗಿಸಿದರೇ ಅದರಿಂದ ಸಿಗುವ ನೆಮ್ಮದಿ ಯಾವುದಕ್ಕೂ ಸಮನಾಗರಾದು ಎಂದು ಹೇಳಿದರು.

ಯಾದಗಿರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ಮಾತನಾಡಿ, ನಮಗೆ ಎಂತಹ ಕಷ್ಟಗಳು ಬಂದರೂ ಸಹ ಪಾರು ಮಾಡುವವನು ಒಬ್ಬ ಭಗವಂತನಿದ್ದಾನೆ ಎಂದು ಧೈರ್ಯದಿಂದ 
ಮುಂದುವರಿಯುತ್ತೇವೆ. ಆದರೆ ಒಳ್ಳೇಯ ಸಂದರ್ಭದಲ್ಲಿ ದೇವರನ್ನು ಮರೆಯುವದು ಸಾಕಷ್ಟು ಜನರಿದ್ದಾರೆ ಇದು ಒಳ್ಳೇಯದಲ್ಲ ಎಂದರು.

ರೆಡ್ಡಿ ಸಮಾಜದ ತಾಲ್ಲೂಕು ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ದೇವನೊಬ್ಬ ನಾಮ ಹಲವು ಎಂಬ ಉಕ್ತಿಯಂತೆ ಭಕ್ತಿಯಿಂದ ಪೂಜಿಸಿದರೇ ದೇವರು ಒಲುಮೆಯಾಗಲು ಸಾಧ್ಯ ಎಂದರು. ಅದರಂತೆ ನಿತ್ಯ ಒಂದಾದರೂ ಪುಣ್ಯದ ಕೆಲಸ ಮಾಡಿ, ಜನ್ಮ ಸಾರ್ಥಕ ಮಾಡಿಕೊಳ್ಳೋಣ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ನಾಗಪ್ಪ ಅಬ್ಯಾಳಿ, ರಾಮನಗೌಡ ಪೊಲೀಸ್ ಪಾಟೀಲ, ಸಂತೋಷ ಹುಂಡೆಕಾರ, ಮಲ್ಲನಗೌಡ ಅಮಲಿಹಾಳ, ಸಂಗನಗೌಡ ಪೊಲೀಸ್ ಪಾಟೀಲ, ಬಸಯ್ಯ ಹಿರೇಮಠ, ಗೋಪಾಲರಾವ ಕುಲಕರ್ಣಿ, ಯಂಕನಗೌಡ ಪೊಲೀಸ್ ಪಾಟೀಲ, ಶಿವಲಿಂಗಪ್ಪ ಭಜನಿ, ನಿಂಗಪ್ಪ ಬೋಯಿ, ಉಸ್ಮಾನಸಾಬ ರೂಡಗಿ, ಬಸಣ್ಣ ಕಲ್ಲತ್ತಿ, ಯಲ್ಲಪ್ಪ ದೊರೆ, ಶ್ರೀಶೈಲ ದೇವತಕಲ್ಲ, ಬಸಪ್ಪ
ಮೇಟಿ, ಸಾಬಣ್ಣ ಗಿಂಡಿ, ಯಲ್ಲಪ್ಪ ಹರಿಜನ, ಬಸಪ್ಪ ಹರಿಜನ, ಸೇರಿದಂತೆ ಗ್ರಾಮಸ್ಥರು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು