ಕಲಬುರಗಿ: ‘ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣದ ಬಳಿಕ ದೇಶದಲ್ಲಿ ದಲಿತ ಚಳವಳಿಯ ಕಸುವು ಕ್ರಮೇಣ ಕುಂದುತ್ತಾ ಸಾಗಿತು’ ಎಂದು ಬೆಳಗಾವಿಯ ಸಾಹಿತಿ, ನಾಟಕಕಾರ ಡಿ.ಎಸ್.ಚೌಗಲೆ ಅಭಿಪ್ರಾಯಪಟ್ಟರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಶನಿವಾರ ಸಪ್ನ ಬುಕ್ ಹೌಸ್, ಕನ್ನಡ ಕಾಲೇಜು ಅಧ್ಯಾಪಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊ.ಎಚ್.ಟಿ.ಪೋತೆ ಅವರ ‘ಅಂಬೇಡ್ಕರ್ ಓದು’, ಕಥಾ ಕಥನ ಭಾಗ–1, ಭಾಗ–2, ಸಂಸ್ಕೃತಿ ಕಥನ, ವ್ಯಕ್ತಿ ಕಥನ, ಎಂ.ಬಿ.ಕಟ್ಟಿ ಸಂಪಾದಿತ ‘ಪ್ರತಿ ಕಥನ’ ಕೃತಿಗಳ ಜನಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತ ವೈಖರಿ ಹಾಗೂ ಅಸ್ಪೃಶ್ಯತೆಯ ಆಚರಣೆಯಿಂದ ಬೇಸತ್ತಿದ್ದ ಅಲ್ಲಿನ ದಲಿತ ಸಮುದಾಯವು ಆಫ್ರಿಕನ್ ದೇಶಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಬ್ಲ್ಯಾಕ್ ಪ್ಯಾಂಥರ್ ಹಾಗೂ ನಿಗ್ರೊ ಸಾಹಿತ್ಯದಿಂದ ಪ್ರಭಾವಿತವಾಗಿ ಇಲ್ಲಿಯೂ ದಲಿತ್ ಪ್ಯಾಂಥರ್ಸ್ ಮೂಲಕ ಪ್ರತಿರೋಧ ಒಡ್ಡಲು ಶುರು ಮಾಡಿದರು. ಅದರಲ್ಲಿ ಮುಖ್ಯವಾಗಿ ನಾಮದೇವ ಢಸಾಳ, ಜೆ.ವಿ.ಪವಾರ್ ಹಾಗೂ ರಾಜಾ ಢಾಲೆ ಪ್ರಮುಖರಾಗಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ನಾಮದೇವ ಢಸಾಳ ದಲಿತ ಚಳವಳಿಯನ್ನು ಬಿಟ್ಟು ಶಿವಸೇನೆಯನ್ನು ಸೇರಿದರು. ದಲಿತ ನಾಯಕರಾಗಿದ್ದ ರಾಮದಾಸ್ ಅಠವಳೆ ಅವರ ಆರ್ಪಿಐ ಪಕ್ಷವು ಬಿಜೆಪಿ ನೇತೃತ್ವದ ಕೂಟವನ್ನು ಸೇರಿಕೊಂಡಿತು. ಹೀಗಾಗಿ, ದಲಿತ ಚಳವಳಿ ಮೊದಲಿನಂತೆ ಹೋರಾಟದ ಕಸುವು ಉಳಿಸಿಕೊಂಡಿಲ್ಲ’ ಎಂದರು.

ಪುಸ್ತಕ ಪರಿಚಯ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅರುಣ ಜೋಳದಕೂಡ್ಲಿಗಿ, ‘ದಲಿತ ಸಂಘರ್ಷ ಸಮಿತಿ ನಾಡಿಗೆ ಕೊಟ್ಟ 'ಬುದ್ಧ–ಬಸವ–ಅಂಬೇಡ್ಕರ್' ತಾತ್ವಿಕ ನೆಲೆಯ ಆಯಾಮಗಳು ಪೋತೆ ಅವರ ಸಾಹಿತ್ಯದಲ್ಲಿ ಮತ್ತೆ ಮತ್ತೆ ಎದುರಾಗುತ್ತದೆ. ಅಂಬೇಡ್ಕರ್ ಅರಿವಿನ ಎಳೆ ಅವರ ಸಂಸ್ಕೃತಿ ಅಧ್ಯಯನ, ಸಂಶೋಧನೆ ಮತ್ತು ಸೃಜನಶೀಲ ಸಾಹಿತ್ಯದಲ್ಲಿ ಗಾಢವಾಗಿ ಬೆಸೆದುಕೊಂಡಿದೆ. ಅಂಬೇಡ್ಕರೋತ್ತರ ಭಾರತದಲ್ಲಿ ದಲಿತರ ಶೋಷಣೆ ಮತ್ತು ಸಂಘರ್ಷದ ನೆಲೆಗಳನ್ನು ಅವರ ಕಥನಗಳಲ್ಲಿ ಶೋಧಿಸಿದ್ದಾರೆ. ಬೇರೆ ಯಾವ ದಲಿತ ಸಾಹಿತಿಗಳಲ್ಲಿಯೂ ಪ್ರಧಾನವಾಗಿ ಕಾಣದ ದಲಿತ–ಮುಸ್ಲಿಂ ಸಾಮರಸ್ಯ ಮತ್ತು ಏಕತೆಯ ಶೋಧ ಪೋತೆ ಅವರ ಕಥೆ ಕಾದಂಬರಿಗಳಲ್ಲಿದೆ’ ಎಂದು ವಿವರಿಸಿದರು.

ಬೆಳಗಾವಿಯ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ವೈ.ಬಿ.ಹಿಮ್ಮಡಿ, ಅಂಬರೀಶ ಬಲ್ಲಿದವ, ಶ್ರೀಶೈಲ ನಾಗರಾಳ, ಎಂ.ಬಿ.ಕಟ್ಟಿ ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ 60ನೇ ವರ್ಷಕ್ಕೆ ಕಾಲಿಟ್ಟ ಪ್ರೊ.ಎಚ್.ಟಿ.ಪೋತೆ ಅವರನ್ನು ಸನ್ಮಾನಿಸಲಾಯಿತು.

ಅಂಬೇಡ್ಕರರಿಗೆ ಗುರುವಾಗಿದ್ದ ಫುಲೆ’

‘ಡಾ.ಬಿ.ಆರ್.ಅಂಬೇಡ್ಕರರು ನಿರಂತರವಾಗಿ ದಲಿತ ಸಮುದಾಯದ ಏಳಿಗೆಗಾಗಿ ಕೆಲಸ ಮಾಡುತ್ತಿದ್ದರು. ಮಹಾರಾಷ್ಟ್ರದಲ್ಲಿ ಸತ್ಯಶೋಧಕ ಸಮಾಜವನ್ನು ಕಟ್ಟಿದ್ದ ಜ್ಯೋತಿಬಾ ಫುಲೆಯವರನ್ನು ತಮ್ಮ ಗುರುವನ್ನಾಗಿ ಸ್ವೀಕರಿಸಿದ್ದರು’ ಎಂದು ಸಾಹಿತಿ ಡಿ.ಎಸ್.ಚೌಗಲೆ ಅಭಿಪ್ರಾಯಪಟ್ಟರು. ‘ಅದಾಗಲೇ ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದ ಫುಲೆ ಅವರು ಪಾಶ್ಚಿಮಾತ್ಯ ದೇಶಗಳಲ್ಲಿನ ಬುದ್ಧಿಜೀವಿಗಳನ್ನು ಪ್ರಭಾವಿಸಿದ್ದ ಡಿಸಂ (ತಾರ್ಕಿಕ ದೈವವಾದ) ಪರಿಕಲ್ಪನೆಯನ್ನು ವಿವರಿಸುವ ಥಾಮಸ್ ಪೈನ್ ಅವರ ರೈಟ್ಸ್ ಆಫ್ ಮ್ಯಾನ್ ಕೃತಿಯನ್ನು ಅಧ್ಯಯನ ಮಾಡಿದ್ದರು. ಅದನ್ನು ಆಧರಿಸಿ ದೇವರಿಗೆ ಸಂಬಂಧಿಸಿದ ಅಂಧಶ್ರದ್ಧೆಗಳನ್ನು ಪ್ರಶ್ನಿಸುವ ನಿಟ್ಟಿನಲ್ಲಿ ಬೀದಿ ನಾಟಕಗಳ ಪ್ರದರ್ಶನ ಶುರು ಮಾಡಿದರು. ಇದು ಅಂಬೇಡ್ಕರ್ ಅವರನ್ನು ಪ್ರಭಾವಿಸಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.