ಸೋಮವಾರ, ಜೂನ್ 1, 2020
27 °C

ಕಲಬುರ್ಗಿ ಲಾಕ್‌ಡೌನ್ | ಪೊಲೀಸರೇ ಮುಂದೆ ನಿಂತು ರಸ್ತೆ ಅಗೆಸಿದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಬೀರಾ ಹಿಸ್ಸಾ‌ ಗ್ರಾಮದ ಬಳಿ ಜಿಲ್ಲೆಯ ‌ಗಡಿಯನ್ನು ಬಂದ್ ಮಾಡಲು ಪೊಲೀಸರೇ ಮುಂದೆ ನಿಂತು ಡಾಂಬರ್ ರಸ್ತೆಯನ್ನು ಅಗೆಸಿ ವಾಹನಗಳು ಬರದಂತೆ ತಡೆದಿದ್ದಾರೆ.

ಬೀರಾ ಹಿಸ್ಸಾದಿಂದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿಗೆ ಸಂಪರ್ಕ ಪಡೆಬಹುದು. ಜನರು ಆಸ್ಪತ್ರೆ, ಬಟ್ಟೆ ಬರೆ ಖರೀದಿ ಹಾಗೂ ಇತರ ಅಗತ್ಯಗಳಿಗಾಗಿ ಸಿಂದಗಿಗೇ ತೆರಳುತ್ತಾರೆ.

ಗ್ರಾಮಸ್ಥರಿಗೇ ತುರ್ತು ವೈದ್ಯಕೀಯ ನೆರವು ಬೇಕಾದರೂ ಆಂಬುಲೆನ್ಸ್ ಅಥವಾ ಇತರ ವಾಹನಗಳು ತೆರಳದಂತಹ ಸ್ಥಿತಿ ನಿರ್ಮಾಣವಾಗಿದೆ.

ಪೊಲೀಸರ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮಸ್ಥ ಸಂಗಮಿತ್ರಾ ಡಿಗ್ಗಿ, ಗಡಿ‌ ಬಂದ್ ಮಾಡುವುದೇ ಆದರೆ ಬ್ಯಾರಿಕೇಡ್ ಹಾಕಬಹುದಿತ್ತು. ಕಟ್ಟಿಗೆ ತುಂಡು ಇಡಬಹುದಿತ್ತು. ಇದನ್ನು ಬಿಟ್ಟು ರಸ್ತೆಯನ್ನು ಅಗೆದರೆ ಹೇಗೆ? ನಮ್ಮ ಗ್ರಾಮಗಳಿಗೆ ಉತ್ತಮ ರಸ್ತೆಗಳೇ ಇರುವುದಿಲ್ಲ.‌ ಅಂಥದರಲ್ಲಿ ಡಾಂಬರ್ ರಸ್ತೆಯನ್ನು ‌ಅಗೆಸಿ ಹಾಕಿದರೆ ಹೇಗೆ ಎಂದು‌ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳದಲ್ಲಿದ್ದ ಪಿಎಸ್ಐ ಪ್ರಜಾವಾಣಿ ಪ್ರತಿನಿಧಿಯ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

'ಗಡಿ ಬಂದ್ ಮಾಡಲು ನಮಗೆ ಆದೇಶವಿದೆ. ಅದಕ್ಕಾಗಿ ರಸ್ತೆ ಅಗೆಸಿದ್ದೇವೆ' ಎಂದು ಇದನ್ನು ಪ್ರಶ್ನಿಸಿದ ಗ್ರಾಮಸ್ಥರಿಗೆ ಸಮಜಾಯಿಷಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು