ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲಿನಲ್ಲಿ ಮಲಗಿದ್ದ ಮಹಿಳೆ ತಾಳಿ ಕಸಿದು ಪರಾರಿ

Published 30 ಜೂನ್ 2024, 6:31 IST
Last Updated 30 ಜೂನ್ 2024, 6:31 IST
ಅಕ್ಷರ ಗಾತ್ರ

ಕಲಬುರಗಿ: ಯಶವಂತಪುರ–ಬೀದರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರ, ವ್ಯಾನಿಟಿ ಬ್ಯಾಗ್ ಕಸಿದು ಕಳ್ಳನೊಬ್ಬ ಪರಾರಿಯಾಗಿದ್ದಾನೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿ ಆರತಿ ಮಾಂಗಲ್ಯ ಸರ ಕಳೆದುಕೊಂಡವರು. ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರತಿ ಅವರು ತಮ್ಮ ಪತಿ ಅನೇಶ್ ಸಿಂಗ್ ಹಾಗೂ ಮೂವರು ಮಕ್ಕಳೊಂದಿಗೆ ಹೈದರಾಬಾದ್‌ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ವಾಡಿ ಜಂಕ್ಷನ್ ಹೊರವಲಯದ ಹಲಕರ್ಟಿ ಸಮೀಪದಲ್ಲಿ ಯಶವಂತಪುರ– ಬೀದರ್ ಎಕ್ಸ್‌ಪ್ರೆಸ್ ರೈಲಿ ಕೆಲ ಹೊತ್ತು ನಿಂತಿತ್ತು. ಕಾಯ್ದಿರಿಸಿದ ಬೋಗಿಯ ಆಸನದಲ್ಲಿ ಆರತಿ ಚಿನ್ನಾಭರಣಗಳಿದ್ದ ವ್ಯಾನಿಟಿ ಬ್ಯಾಗ್‌ ತಲೆಯ ಕೆಳಗಿ ಇರಿಸಿಕೊಂಡು ಮಲಗಿದ್ದರು. ಅಪರಿಚಿತ ಕಳ್ಳ ಕಿಟಕಿಯಿಂದ ಕೈ ಹಾಕಿ, ಮಹಿಳೆಯ ಕತ್ತಲ್ಲಿದ್ದ ತಾಳಿ ಸೇರಿ ₹ 2.44 ಲಕ್ಷ ಮೌಲ್ಯದ ಒಡವೆಗಳು ಇದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT