ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಅಶ್ವಾರೂಢ ಬಸವೇಶ್ವರ ಪ್ರತಿಮೆ ಅನಾವರಣ

ಹಲವು ದಶಕಗಳ ಕನಸು ಈಡೇರಿಕೆ;ಜನರ ಮುಖದಲ್ಲಿ ಮಂದಹಾಸ
Last Updated 21 ಮಾರ್ಚ್ 2023, 5:03 IST
ಅಕ್ಷರ ಗಾತ್ರ

ಸೇಡಂ: ಪಟ್ಟಣದಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪಿಸಬೇಕೆಂಬ ಜನರ ಬಹುದಶಕಗಳ ಬೇಡಿಕೆ ಸೋಮವಾರ ವಿವಿಧ ಮಠಗಳ ಮಠಾಧೀಶರ ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ನೆರವೇರಿತು.

ಕಲಬುರಗಿ ವೃತ್ತವನ್ನು ಬಸವೇಶ್ವರ ವೃತ್ತವೆಂದು ಘೋಷಿಸಲಾಯಿತು. ಅಲ್ಲದೆ ಅಶ್ವಾರೂಢ ಬಸವೇಶ್ವರ ಪ್ರತಿಮೆಯ ಸುತ್ತಲೂ ಶಿಲೆಯಲ್ಲಿ ಕೆತ್ತಲಾದ ವಚನಗಳ ಅನಾವರಣ ಕೂಡ ಮಠಾಧೀಶರ ಸಾನ್ನಿಧ್ಯದಲ್ಲಿ ನೆರವೇರಿತು.

ಪ್ರತಿಮೆ ಅನಾವರಣಗೊ ಳ್ಳುತ್ತಿ ದ್ದಂತೆಯೇ ಬಸವೇಶ್ವರ ಮಹಾರಾಜ್‌ ಕಿ ಜೈ, ಘಂಟಘೋಷನಾದ ಸುತ್ತಲೂ ಮೊಳಗಿದವು. ಯುವಕರು ಕೇಸರಿ ಶಾಲು ಧರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೆಲವರು ಸಿಹಿ ಹಂಚಿ ಪರಸ್ಪರ ಸಹಕಾರ ಭಾವನೆಯಿಂದ ಮೆರೆದರು.

ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಭಾರತ ಸನಾತನ ಧರ್ಮವಾಗಿದ್ದು ಸ್ವಾತಂತ್ರ್ಯ ದೊರೆತ ನಂತರ ಮೂರ್ತಿ ಪ್ರತಿಷ್ಠಾಪಿಸಲು ಹಿಂದುಗಳು ಯೋಚಿಸಬೇಕಾಗಿತ್ತು. ಆದರೆ ಈಗ ದೇಶದಲ್ಲಿ ಮಹಾನ್ ಪುರುಷರ ಮತ್ತು ಸಂತರ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತಿರುವುದು ಸಂತಸ ತಂದಿದೆ’ ಎಂದರು.

‘ಜಗತ್ತಿಗೆ ಸಮಾನತೆಯನ್ನು ಸಾರಿಗೆ ಬಸವೇಶ್ವರರ ತತ್ವ ಸಿದ್ಧಾಂತಗಳು ನಮಗೆ ಬೇಕು. ಮತ್ತೊಂದು ಹಿಂದು ಧರ್ಮಕ್ಕೆ ಧಕ್ಕೆಯಾದಾಗ ಅದಕ್ಕೆ ತಕ್ಕುದಾದ ಉತ್ತರ ಕೊಡುವ ಆತ್ಮಶಕ್ತಿಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಹಾರಕೂಡ ಡಾ.ಚನ್ನವೀರ ಶಿವಾ ಚಾರ್ಯ ಮಾತನಾಡಿ, ಶರಣರ ಆದರ್ಶ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮೃದ್ಧಮಯ ಜೀವನ ನಡೆಸಲು ಸಾಧ್ಯ' ಎಂದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿದರು.

ಕೋರಿಸಿದ್ದೇಶ್ವರ ಸಂಸ್ಥಾನದ ಡಾ.ಸಿದ್ದತೋಟೇಂದ್ರ ಶಿವಾಚಾರ್ಯ, ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ಸುಲೇಪೇಟ ಏಕದಂಡಗಿ ಮಠದ ದೊಡ್ಡೇಂದ್ರ ಸ್ವಾಮೀಜಿ, ಅಕ್ಕ ಗಂಗಾಂಬಿಕೆ, ಮಲ್ಲಣ್ಣ ಸ್ವಾಮೀಜಿ ಮಾತನಾಡಿದರು.

ಅಬ್ಬೆ ತುಮಕೂರಿನ ಡಾ. ಗಂಗಾಧರ ಶಿವಾಚಾರ್ಯರು, ಬಳಿರಾಮ ಮಹಾರಾಜರು, ಶಾಖಾಪುರದ ಡಾ. ಸಿದ್ದರಾಮ ಶಿವಾಚಾರ್ಯರು, ಸಿದ್ದ ರಮಾನಂದ ಮಹಾಸ್ವಾಮೀಜಿ, ದೊಡ್ಡೆಂದ್ರ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ, ಗಂಗಾಂಬಿಕೆ ಅಕ್ಕ, ಮಲ್ಲಣ್ಣಪ್ಪ ಸ್ವಾಮೀಜಿ, ಶಿವಶಂಕರ ಶಿವಾಚಾರ್ಯ, ಕೊಟ್ಟೂರೇಶ್ವರ ಶಿವಾ ಚಾರ್ಯ, ಬಸವರಾಜ ಮತ್ತಿಮೂಡ್, ಬಿಜಿ ಪಾಟೀಲ್, ಡಾ. ಶರಣಪ್ರಕಾಶ ಪಾಟೀಲ್, ದೊಡ್ಡಪ್ಪ ಗೌಡ ಪಾಟೀಲ್, ಬಸವ ಸೇವಾ ಬಳಗ ಚಾರಿಟೇಬಲ್ ಆಂಡ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಶಿವುಕುಮಾರ್ ಪಾಟೀಲ್ ತೆಲ್ಕೂರ್, ಶಿವಯ್ಯಸ್ವಾಮಿ ಬಿಬ್ಬಳ್ಳಿ, ಚಂದ್ರಶೆಟ್ಟಿ ಬಂಗಾರ, ಅರುಣಕುಮಾರ್ ಪಾಟೀ ಲ್, ಪುರಸಭೆ ಅಧ್ಯಕ್ಷೆ ಶೋಭಾ ಹೂ ಗಾರ್, ಸಂತೋಷಿ ರಾಣಿ ಪಾಟೀಲ್ ತೆಲ್ಕೂರ, ವೀರೇಶ ಹೂಗಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT