ಕಲಬುರಗಿ: ‘ಲೇಖಕ ಶಾಮಲಿಂಗ ಜವಳಿ ಅವರು ಮಹಾನ್ ಸಾಹಸ ಮಾಡಿ ಬಸವ ಸಂಸ್ಕೃತಿಯ ಕುರಿತಾದ ಅಪರೂಪದ ಬೃಹತ್ ಹೊತ್ತಿಗೆಯನ್ನು ಹೊರತರುತ್ತಿದ್ದಾರೆ. ಅದು ಪ್ರತಿ ಮನೆಯ ಗ್ರಂಥವಾಗಬೇಕು’ ಎಂದು ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಆಶಿಸಿದರು.

ಜನಸ್ನೇಹಿ ಸಮಾನ ಮನಸ್ಕ ಚಿಂತಕರ ವೇದಿಕೆ, ಶರಣ ಸಂಸ್ಕೃತಿ ದೃಶ್ಯಕಲಾ ಸಂಗ್ರಹಾಲಯ ಹಾಗೂ ಸಂಶೋಧನಾ ಕೇಂದ್ರದಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಬಸವಯುಗ ವೈಭವ’ ಗ್ರಂಥದ ಮುಖಪುಟ ಅನಾವರಣ, ‘ಭಕ್ತಿ ಸಾಗರ’ ಪುಸ್ತಕ ಬಿಡುಗಡೆ, ‘ಜಗದಗಲ ಮುಗಿಲಗಲ’ ಕಲಾಕೃತಿ ಅನಾವರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪುಸ್ತಕವು ಕಲಬುರಗಿಯಲ್ಲಿ ಮಾರ್ಚ್ ವೇಳೆಗೆ ಬಿಡುಗಡೆಯಾಗಲಿದೆ. ಬಸವತತ್ವ, ಶರಣರ ಬಗೆಗಿನ ಸಮಗ್ರ ಮಾಹಿತಿ ಇರಲಿದೆ. ಹೀಗಾಗಿ, ಈ ಪುಸ್ತಕವನ್ನು ಎಲ್ಲರೂ ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.

‘ಬಸವಯುಗ ವೈಭವ’ ಗ್ರಂಥದ ಲೇಖಕ ಶಾಮಲಿಂಗ ಜವಳಗಿ ಮಾತನಾಡಿ, ‘12ನೇ ಶತಮಾನದಿಂದ 21ನೇ ಶತಮಾನದವರೆಗೆ ಶರಣ ಚಳವಳಿಯ ಇತಿಹಾಸ, ಸಾಹಿತ್ಯ, ಚಿತ್ರಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ. 800 ಪುಟಗಳ ಈ ಬೃಹತ್ ಗ್ರಂಥವು 3.5 ಕೆ.ಜಿ. ತೂಗುತ್ತದೆ. ಬಹುವರ್ಣದ ಪುಟಗಳಲ್ಲಿ ಈ ಪುಸ್ತಕವನ್ನು ಮುದ್ರಿಸಲಾಗುತ್ತಿದ್ದು, 250 ವರ್ಷಗಳ ಹಿಂದಿನ ಚಿತ್ರಗಳಿಂದ ಹಿಡಿದು ಎಐವರೆಗಿನ 600 ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ₹ 3 ಸಾವಿರ ಬೆಲೆ ನಿಗದಿಪಡಿಸಲಾಗಿದ್ದು, ಸಾಕಷ್ಟು ಜನ ಮುಂಚಿತವಾಗಿಯೇ ಪುಸ್ತಕ ಖರೀದಿಗೆ ಬುಕಿಂಗ್ ಮಾಡಿದ್ದಾರೆ’ ಎಂದರು.

ಯುವ ಮುಖಂಡ ಮಹೇಶ ರೆಡ್ಡಿ ಮುದ್ನಾಳ ಮಾತನಾಡಿ, ‘ಬಸವಣ್ಣನವರು 12ನೇ ಶತಮಾನಕ್ಕಿಂತ 21ನೇ ಶತಮಾನಕ್ಕೆ ಹೆಚ್ಚು ಅಗತ್ಯವಾಗಿದ್ದಾರೆ. ದಿನೇ ದಿನೇ ಮಾನವ ಮೌಲ್ಯಗಳ ಕುಸಿತವಾಗುತ್ತಿದೆ’ ಎಂದು ವಿಷಾದಿಸಿದರು.

ಬಸವಾದಿ ಶರಣರ ಕುರಿತಾದ ಪುಸ್ತಕಗಳನ್ನು ಬರೆಯುವುದರ ಜೊತೆಗೆ ಸಾಮಾಜಿಕ ಮಾಧ್ಯಮಗಳು ವೆಬ್ಸೈಟ್ಗಳಲ್ಲಿ ಅವುಗಳ ಬಗ್ಗೆ ಆಗಾಗ ಮಾಹಿತಿ ನೀಡುತ್ತಿದ್ದರೆ ಇಂದಿನ ಪೀಳಿಗೆಗೆ ಅದನ್ನು ತಲುಪಿಸಬಹುದು
ಡಾ.ಅಲ್ಲಮಪ್ರಭು ದೇಶಮುಖ ಶರಣಬಸವೇಶ್ವರ ಸಂಸ್ಥಾನ

2 ಲಕ್ಷ ಜನರಿಂದ ಇಷ್ಟಲಿಂಗ ಪೂಜೆ

‘ಬಸವಣ್ಣನವರ ಕರ್ಮಭೂಮಿಯಾದ ಬಸವಕಲ್ಯಾಣಕ್ಕೆ ಹೆಚ್ಚು ಜನರು ಭೇಟಿ ನೀಡುವುದು ಅವಶ್ಯವಾಗಿದೆ. ಅದಕ್ಕಾಗಿ 2027ರಲ್ಲಿ 2 ಲಕ್ಷ ಜನರನ್ನು ಸೇರಿಸಿ ಸಾಮೂಹಿಕ ಇಷ್ಟಲಿಂಗ ಪೂಜೆಗೆ ತಯಾರಿ ನಡೆದಿದೆ’ ಎಂದು ಬಸವರಾಜ ಪಾಟೀಲ ಸೇಡಂ ಹೇಳಿದರು. ‘ಬಸವಕಲ್ಯಾಣದ ಅನುಭವ ಮಂಟಪವೇ ಜಗತ್ತಿನ ಮೊದಲ ಸಂಸತ್ತು ಎಂದು ನಾವು ಹೇಳುತ್ತೇವೆ. ಆದರೆ ಈ ವಾದಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ.

ಹೀಗಾಗಿ ಸಾಮೂಹಿಕ ಇಷ್ಟ ಲಿಂಗದ ಜೊತೆಗೆ 21 ವರ್ಷದೊಳಗಿನ ಯುವಕರನ್ನು ಕರೆಸಿ ಸಂಸತ್ತು ನಡೆಸಲಾಗುವುದು. ತಮ್ಮನ್ನು ಪ್ರಜಾಪ್ರಭುತ್ವ ದೇಶ ಎಂದು ಕರೆದುಕೊಳ್ಳುವ ದೇಶಗಳ ಮುಖ್ಯಸ್ಥರಿಗೆ ಆಹ್ವಾನ ಕಳುಹಿಸಿ ಈ ಸಂಸತ್ತಿನಲ್ಲಿ ಭಾಗವಹಿಸಲು ತಮ್ಮ ದೇಶಗಳ ಪ್ರತಿನಿಧಿಗಳನ್ನು ಕಳುಹಿಸುವಂತೆ ಕೋರಲಾಗುವುದು. ಈ ಬಗ್ಗೆ ಇದೇ 21 22ರಂದು ಬಸವಕಲ್ಯಾಣದಲ್ಲಿ ಪೂರ್ವಸಿದ್ಧತಾ ಸಭೆ ಕರೆಯಲಾಗಿದೆ’ ಎಂದು ತಿಳಿಸಿದರು. ‘ಬಸವಕಲ್ಯಾಣಕ್ಕೆ ಹೆಚ್ಚು ಜನರು ಭೇಟಿ ನೀಡಿ ಬಸವಣ್ಣನವರ ಕರ್ಮಭೂಮಿಯನ್ನು ನೋಡಬೇಕು ಎಂಬುದು ನಮ್ಮ ಆಶಯ. ಅದಕ್ಕಾಗಿ ಮೂಲಸೌಕರ್ಯಗಳು ಅಭಿವೃದ್ಧಿಯಾಗಬೇಕು. ನಿತ್ಯ 5 ಸಾವಿರ ಜನ ಭೇಟಿ ನೀಡುವಂತಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.