ಕಲಬುರಗಿ: ‘ಕೃತಕಬುದ್ಧಿಮತ್ತೆ ಉದ್ಯೋಗಗಳನ್ನು ನಾಶಪಡಿಸುತ್ತದೆಂದು ಭಯ ಪಡಬೇಡಿ. ಅದನ್ನು ಬುದ್ಧಿವಂತಿಕೆಯಿಂದ ಬಳಸಿದರೆ ಯಶಸ್ಸು ಸಾಧ್ಯ’ ಎಂದು ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಸಲಹೆ ನೀಡಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶನಿವಾರ ವ್ಯವಹಾರ ಅಧ್ಯಯನ ನಿಕಾಯ ‘ಎ.ಐ ಯುಗದಲ್ಲಿ ಸಣ್ಣ ಉದ್ಯಮ ಕಟ್ಟುವುದು ಆಯ್ಕೆಯಲ್ಲ, ಅನಿವಾರ್ಯ!’ ವಿಷಯದ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಐನಿಂದ ಭಯ ಪಡಬೇಡಿ. ಅಜ್ಞಾನದಿಂದ ಭಯ ಬರುತ್ತದೆ. ಎಐನೊಂದಿಗೆ ಕೆಲಸ ಮಾಡಲು ಕಲಿಯಿರಿ. ಆದಷ್ಟು ಬೇಗನೆ ಆರಂಭಿಸಿ, ವೈಫಲ್ಯವಾದರೆ ಎದೆಗುಂದದಿರಿ. ಆರಂಭಿಕ ವೈಫಲ್ಯಗಳು ಜೀವಮಾನದ ಪಾಠಗಳನ್ನು ಕಲಿಸುತ್ತವೆ. ಎಐ ಬಳಸಲು ತಂತ್ರಜ್ಞರಾಗುವ ಅಗತ್ಯವಿಲ್ಲ. ಎಐ ಚಿಲ್ಲರೆ ವ್ಯಾಪಾರದಿಂದ ಹಿಡಿದು ಪ್ರತಿಯೊಂದು ಉದ್ಯಮದಲ್ಲಿ ಉದ್ಯೋಗಗಳನ್ನು ಬದಲಾಯಿಸುತ್ತಿದೆ. ಎಐ ಒಂದು ಸಾಧನವಾಗಿದ್ದು ಅದು ಇಂಟರ್ನೆಟ್ನಂತೆ, ನೀವು ಅದನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ’ ಎಂದರು.

‘ಸಮಯವು ನಿಮ್ಮ ದೊಡ್ಡ ಆಸ್ತಿಯಾಗಿದೆ. ಅದನ್ನು ಬುದ್ಧಿವಂತಿಕೆಯಿಂದ ಬಳಸಿ. ಎಲ್ಲವೂ ಆನ್ಲೈನ್ ಆದ ಕಾರಣ, ವ್ಯವಹಾರವನ್ನು ಪ್ರಾರಂಭಿಸಲು ಇನ್ನು ಮುಂದೆ ಅಂಗಡಿ ಅಥವಾ ಕಚೇರಿ ಅಗತ್ಯವಿರುವುದಿಲ್ಲ’ ಎಂದು ರಂಗಸ್ವಾಮಿ ತಿಳಿಸಿದರು.

‘ಪ್ರಕೃತಿ ತಟಸ್ಥವಾಗಿದೆ. ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ. ಪ್ರತಿಯೊಬ್ಬರಿಗೂ ಅವರದೇ ಆದ ಸಾಮರ್ಥ್ಯ ಮತ್ತು ಅವರದೇ ಆದ ಸಮಯವಿದೆ. ಇಂದಿನ ದಿನಗಳಲ್ಲಿ ಕೇವಲ ₹10,000 ಹೂಡಿಕೆ ಮಾಡಿದರೆ ವ್ಯವಹಾರ ಆರಂಭಿಸಬಹುದು. ಜ್ಞಾನ, ಸಮಯ ಮತ್ತು ಹಣ ಬಹಳ ಅತ್ಯಮೂಲ್ಯವಾಗಿದೆ. ಮೊದಲು ನೀವು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದೀರಿ ಎಂಬುದನ್ನು ನಿರ್ಧರಿಸಬೇಕು. ಉದ್ಯೋಗ ಸಿಗುತ್ತಿಲ್ಲವೆಂದು ದೂಷಿಸಬೇಡಿ. ನಿಮಗೇ ಗೊತ್ತಿಲ್ಲದ ಶಕ್ತಿ ನಿಮ್ಮಲ್ಲಿದೆ. ಸಮಯ ವ್ಯರ್ಥ ಮಾಡಬೇಡಿ. ಯಾವಾಗಲೂ ಉತ್ತಮ ನಾಳೆಗಾಗಿ ಯೋಜನೆ ಮಾಡಿ’ ಎಂದು ಸಲಹೆ ನೀಡಿದರು.

ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಎಸ್.ಜಿ. ಡೊಳ್ಳೆಗೌಡರ್, ಮೌಲ್ಯಮಾಪನ ಕುಲಸಚಿವ ಎಸ್.ಎಚ್. ಹೊನ್ನಳ್ಳಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.